ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡಸಿದ್ದು, ಈ ವೇಳೆ ದೇಶಿಯವಾಗಿ 4ಜಿ ಅಥವಾ 5ಜಿ ಬೆಂಬಲಿತ ಸ್ಮಾರ್ಟ್ಫೋನ್ ವಿನ್ಯಾಸಗೊಳಿಸುವುದಾಗಿ ಘೋಷಿಸಿದೆ.
ಲಡಾಖ್ ಗಡಿಯಲ್ಲಿ ಚೀನಾ ತಕರಾರು ತೆಗೆದು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಚೀನಾ ವಸ್ತು ನಿಷೇಧ ಅಭಿಯಾನ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ನಡುವೆ ಹಲವು ಕಂಪನಿಗಳು, ಉದ್ಯಮಿ ಸಂಘಟನೆಗಳು ಚೀನಾದ ಸರಕುಗಳ ಆಮದಿಗೆ ಬ್ರೇಕ್ ಹಾಕುವುದಾಗಿ ಹೇಳಿವೆ. ಈ ನಡುವೆ ರಿಲಯನ್ಸ್ ದೇಶಿಯವಾಗಿ 4ಜಿ ಮತ್ತು 5ಜಿ ಸ್ಮಾರ್ಟ್ಫೋನ್ ವಿನ್ಯಾಸಗೊಳಿಸುವುದಾಗಿ ಹೇಳಿದೆ.
ಭಾರತದ ಸೆಲ್ಯುಲಾರ್ ಮಾರುಕಟ್ಟೆಯನ್ನು ಬೆಂಬಲಿಸಲು ಪ್ರವೇಶ ಮಟ್ಟದ 4 ಜಿ ಅಥವಾ 5 ಜಿ ಸ್ಮಾರ್ಟ್ಫೋನ್ ವಿನ್ಯಾಸಗೊಳಿಸಲಿದೆ ಎಂದು ರಿಲಯನ್ಸ್ ಮುಖೇಶ್ ಅಂಬಾನಿ ಹೇಳಿದ್ದಾರೆ.
ಭಾರತವು 5 ಜಿ ಯುಗದ ಹೊಸ್ತಿಲಲ್ಲಿ ನಿಂತಿರುವುದರಿಂದ ಪ್ರಸ್ತುತ 2ಜಿ ಫೀಚರ್ ಫೋನ್ ಬಳಸುತ್ತಿರುವ 350 ಮಿಲಿಯನ್ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್ಫೋನ್ ನೀಡಬೇಕಿದೆ.
ಜಿಯೋ ಹೆಲ್ತ್ ಪ್ಲಾಟ್‌ಫಾರ್ಮ್‌ನೊಂದಿಗೆ ಆನ್‌ಲೈನ್ ಸಮಾಲೋಚನೆ ಸೇವೆ ಒದಗಿಸಲಾಗುತ್ತದೆ. ಆರೋಗ್ಯ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಬುಕ್ ಲ್ಯಾಬ್ ಪರೀಕ್ಷೆಗಳ ಸೇವೆ ನೀಡಲಾಗುತ್ತಿದೆ ಎಂದು ಇಶಾ ಅಂಬಾನಿ ತಿಳಿಸಿದ್ದಾರೆ.
ಜಿಯೋ ಎಜ್ಯುಕೇಷನ್ ಪ್ಲಾಟ್‌ಫಾರ್ಮ್, ಭಾರತದಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆ ನೀಗಿಸಲು ಪ್ರಯತ್ನಿಸುತ್ತದೆ. ರಿಲಯನ್ಸ್ ಫೌಂಡೇಷನ್ ವೈಯಕ್ತೀಕರಣ, ಅತ್ಯುತ್ತಮ ವಿಷಯ ಮತ್ತು ಶಿಕ್ಷಕರ ಸಬಲೀಕರಣಕ್ಕೆ ಮುಂದಾಗಿದೆ ಎಂದರು.
ವರ್ಚುವಲ್ ಒಪಿಡಿ ಸೇವೆಗಳನ್ನು ಒದಗಿಸಲು ಆರ್ಐಎಲ್ ಫೌಂಡೇಷನ್ ಜಿಯೋ ಹೆಲ್ತ್ ಹಬ್ ಪ್ಲಾಟ್‌ಫಾರ್ಮ್ ಬಳಸುತ್ತಿದೆ. ಕೋವಿಡ್ ಪಾಸಿಟಿವ್ ರೋಗಿಗಳಿಗೆ ತಮ್ಮ ಮನೆಗಳಿಂದ ಗುಣಮಟ್ಟದ ಆರೈಕೆಗೆ ಇದು ನೆರವಾಗಲಿದೆ ಎಂದು ಇಶಾ ಅಂಬಾನಿ ತಿಳಿಸಿದರು.