ಕರ್ನಾಟಕ

karnataka

ETV Bharat / business

ಮಾರುತಿ ಡೀಸೆಲ್​ ಇಂಜಿನ್​ ಕಾರು ಉತ್ಪನ್ನ ಸ್ಥಗಿತ... ಫೋರ್ಡ್​ ಇಂಡಿಯಾ ಹೇಳಿದ್ದೇನು?

ಬಿಎಸ್​- 6ನಿಂದಾಗಿ ವಾಹನಗಳ ಬೆಲೆ ಶೇ 8ರಿಂದ ಶೇ 10ರ ವರೆಗೂ ಏರಿಕೆಯಾಗಲಿದೆ. ಡೀಸೆಲ್ ವಾಹನಗಳ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗುವುದಿಲ್ಲ. ಇವುಗಳ ಜೊತೆಗೆ ಎಲ್ಲ ಮಾದರಿಯಾ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ವಿನಯ್ ರೈನಾ

By

Published : May 1, 2019, 7:46 AM IST

ಚಿತ್ರ ಕೃಪೆ: ಟ್ವಿಟ್ಟರ್​

ನವದೆಹಲಿ: ದೇಶದ ಅತಿದೊಡ್ಡ ಕಾರುಗಳ ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ಡೀಸೆಲ್​ ಇಂಜಿನ್​ ವಾಹನಗಳ ಮಾರಾಟ ಸ್ಥಗಿತಗೊಳಿಸುವ ಸೂಚಿನ ನೀಡಿದ ಬೆನ್ನಲ್ಲೇ ಫೋರ್ಡ್​ ಇಂಡಿಯಾ ಕೂಡ ತನ್ನ ನಿಲುವು ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಫೋರ್ಡ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ, ಭಾರತದಲ್ಲಿ ಡೀಸೆಲ್ ಇಂಜಿನ್ ವಾಹನಗಳ ಮಾರಾಟ ನಿಲ್ಲಿಸುವ ಯಾವುದೇ ಚಿಂತನೆ ನಮ್ಮ ಮುಂದೆ ಇಲ್ಲ ಎಂದಿದ್ದಾರೆ.

2020ರ ಏಪ್ರಿಲ್​ 1ರ ಗಡುವಿಗೂ ಮೊದಲೇ ಬಿಎಸ್​-6 ಮಾನದಂಡಕ್ಕೆ ಅನುಗುಣವಾಗಿ ಡೀಸೆಲ್​ ಇಂಜಿನ್​ ಮಾದರಿಗಳನ್ನು ಸನ್ನದ್ಧಗೊಂಡಿವೆ. ಭಾರತದ ದೇಶಿ ಗ್ರಾಹಕರಿಗೆ ನೀಡುತ್ತಿರುವ ಆಯ್ಕೆಯ ಅವಕಾಶಗಳನ್ನು ಮುಂದುವರೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ವಾಹನ ಖರೀದಿಯಲ್ಲಿ ಪೆಟ್ರೋಲ್​ ಇಂಜಿನ್​ಗೆ ಹೋಲಿಸಿದರೆ ಶೇ 65ರಷ್ಟು ಜನರು ಡೀಸೆಲ್​ ಇಂಜಿನ್ ಇರುವ ಇಕೊಸ್ಪೋರ್ಟ್ಸ್​ ಖರೀದಿಸುತ್ತಿದ್ದಾರೆ. ಪ್ರಸ್ತುತ, ಡೀಸೆಲ್​ ವಾಹನಗಳಿಗೆ ಬೇಡಿಕೆ ಇದೆ. 2020ರ ಬಳಿಕವೂ ಈ ಬೇಡಿಕೆ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್​- 6ನಿಂದಾಗಿ ವಾಹನಗಳ ಬೆಲೆ ಶೇ 8ರಿಂದ ಶೇ 10ರ ವರೆಗೂ ಏರಿಕೆಯಾಗಲಿದೆ. ಡೀಸೆಲ್ ವಾಹನಗಳ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗುವುದಿಲ್ಲ. ಇವುಗಳ ಜೊತೆಗೆ ಎಲ್ಲ ಮಾದರಿಯಾ ಕಾರುಗಳ ಬೆಲೆ ಹೆಚ್ಚಳವಾಗಲಿದೆ ಎಂದು ರೈನಾ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details