ಕರ್ನಾಟಕ

karnataka

ETV Bharat / business

ಹೈದರಾಬಾದ್​ನ 'ಹುಸೇನ್ ಸಾಗರ್ ಕೆರೆ' ದಿಢೀರಾಗಿ 'ಜೈ ಶ್ರೀ ರಾಮ್ ಕೆರೆ'ಯಾಗ್ಬಿಟ್ಟಿದ್ಹೇಗೆ?

ಸರ್ಚ್​ ಎಂಜಿನ್ ದೈತ್ಯ ಗೂಗಲ್​ ಮ್ಯಾಪ್​ನಲ್ಲಿ. ಹುಸೇನ್ ಸಾಗರ್ ಕೆರೆಯ ಹೆಸರು 'ಜೈ ಶ್ರೀ ರಾಮ್ ಕೆರೆ' ಎಂದು ಬದಲಾದ ಹೆಸರು ನೋಡಿ ಹಲವರು ಆಶ್ಚರ್ಯಚಕಿತರಾದರು. ಜೊತೆಗೆ ವಿಧ್ವಂಸಕ ಸೈಬರ್ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 20, 2019, 10:05 PM IST

ಹೈದರಾಬಾದ್:ತೆಲಂಗಾಣ ರಾಜಧಾನಿ ಹೈದರಾಬಾದ್​ನ ಹೃದಯ ಭಾಗದಲ್ಲಿರುವ ನಡು ನೀರಿನ ಮಧ್ಯೆ ಗೌತಮ ಬುದ್ಧನ ಪ್ರತಿಮೆ ಇರುವ 'ಹುಸೇನ್ ಸಾಗರ್ ಕೆರೆ'ಯ ಹೆಸರು 'ಜೈ ಶ್ರೀ ರಾಮ್ ಸಾಗರ್' ಎಂದು ಪ್ರದರ್ಶನಗೊಂಡು ನೋಡುಗರಲ್ಲಿ ದಿಗ್ಬ್ರಮೆ ಮೂಡಿಸಿತ್ತು.

ಈ ವಿಲಕ್ಷಣ ಘಟನೆ ನಡೆದದ್ದು ಸರ್ಚ್​ ಎಂಜಿನ್ ದೈತ್ಯ ಗೂಗಲ್​ ಮ್ಯಾಪ್​ನಲ್ಲಿ. ಹುಸೇನ್ ಸಾಗರ್ ಕೆರೆಯ ಹೆಸರು 'ಜೈ ಶ್ರೀ ರಾಮ್ ಕೆರೆ' ಎಂದು ಬದಲಾದ ಹೆಸರು ನೋಡಿ ಹಲವರು ಆಶ್ಚರ್ಯಚಕಿತರಾದರು. ಜೊತೆಗೆ ವಿಧ್ವಂಸಕ ಸೈಬರ್ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೈದರಾಬಾದ್ ಹುಸೇನ್ ಸಾಗರ್ ಕೆರೆ ಇದ್ದಕ್ಕಿದ್ದಂತೆ ಜೈಶ್ರೀರಾಮ್ ಕೆರೆ ಆಯಿತು! ಮತ್ತು @googlemaps ಯಾವುದೇ ಸಂಪಾದನೆಗೆ ಅವಕಾಶ ನೀಡುವುದಿಲ್ಲ. ಆದರೂ ಇದು ಹೇಗೆ ಆಯಿತು ಎಂಬುದು ನನಗೆ ಆಶ್ಚರ್ಯವಾಗಿದೆ ಎಂದು ಟ್ವಿಟರ್​ ಬಳಕೆದಾರರು ಬರೆದುಕೊಂಡಿದ್ದಾರೆ.

ದುಷ್ಕರ್ಮಿಗಳು ಹೈದರಾಬಾದ್​ನಲ್ಲಿನ ಹುಸೇನ್ ಸಾಗರ್ ಕೆರೆಯ ಹೆಸರನ್ನ ಜೈಶ್ರೀರಾಮ್ ಕೆರೆ ಎಂದು ಬದಲಾಯಿಸಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್​ ಮಾಡಿದ್ದಾರೆ.ಗೂಗಲ್ ತನ್ನ ಫೀಚರ್​ಗಳ ಸೇವೆಗಳಲ್ಲಿ ಬಳಕೆದಾರರು ಸ್ಥಳೀಯ ಮಾಹಿತಿಯನ್ನು ತುಂಬಲು ಎಂದು ವಿನಾಯಿತಿ ನೀಡಿ ಸಂಪಾದನೆಗೆ ಕಂಪನಿಯು ಅವಕಾಶ ನೀಡಿದೆ. ಆದರೆ, ಕೆಲವರು ಇದನ್ನು ಸಕಾರಾತ್ಮಕ ಉದ್ದೇಶಕ್ಕೆ ಬಳಿಸಿಕೊಳ್ಳದೆ ದುಷ್ಕೃತ್ಯಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂದು ಗೂಗಲ್​ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details