ನವದೆಹಲಿ:ಸಾಮಾಜಿಕ ಜಾಲತಾಣದ ಮೆಸೇಂಜರ್ ತಂತ್ರಾಂಶ ವಾಟ್ಸ್ಆ್ಯಪ್ ಸೇವೆಯು ಜಾರಿಗೆ ಬಂದು ಈ ವರ್ಷಕ್ಕೆ 10 ವರ್ಷ ಕಳೆಯಲಿದೆ. ಇದನ್ನೇ ನೆಪ ಮಾಡಿಕೊಂಡ ಹ್ಯಾಕಿಂಗ್ ವಂಚಕರು 1,000 ಜಿಬಿ ಉಚಿತ ಇಂಟರ್ನೆಟ್ ಆಮಿಷಯೊಡ್ಡುವ ಲಿಂಕ್ ಹರಿಬಿಟ್ಟಿದ್ದಾರೆ.
1,000 ಜಿಬಿ ಉಚಿತ ಇಂಟರ್ನೆಟ್ ಡೇಟಾ ಎಂಬ ವಾಟ್ಸ್ಆ್ಯಪ್ ಸಂದೇಶದ ಲಿಂಕ್ ಒಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಸೈಬರ್ ಭದ್ರತಾ ಸಂಸ್ಥೆ ಇಸೆಟ್ ಎಚ್ಚರಿಸಿದೆ.
ಪ್ರಸಿದ್ಧ ಬ್ರ್ಯಾಂಡ್ಗಳ ಹೆಸರಲ್ಲಿ ನಡೆಯುವ ಇಂತಹ ಉಚಿತ ಕೊಡುಗೆಗಳನ್ನು ವ್ಯವಸ್ಥಿತವಾಗಿ ಪ್ರಚಾರಪಡಿಸುತ್ತಾರೆ. ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿರುವ 1,000 ಜಿಬಿ ಡೇಟಾ ಯುಆರ್ಎಲ್ ಅಧಿಕೃತವಾಗಿಲ್ಲ ಎಂದು ಬ್ಲಾಗ್ ಸಂಶೋಧಕರು ಹೇಳಿದ್ದಾರೆ.