ಕರ್ನಾಟಕ

karnataka

ETV Bharat / business

ವಿಆರ್​ಎಸ್​ಗೆ ಬಿಎಸ್​ಎನ್​ಎಲ್​ ಭರದ ಸಿದ್ಧತೆ... ಚುನಾವಣೆ ಆಯೋಗದ ಮೊರೆ - ಚುನಾವಣಾ ಆಯೋಗ

50 ವರ್ಷಕ್ಕಿಂತ ಅಧಿಕ ವಯೋಮಾನದ ನೌಕರರಿಗೆ ವಿಆರ್‌ಎಸ್‌ ಕೊಡುಗೆ ನೀಡುವ ನಿರೀಕ್ಷೆ ದಟ್ಟವಾಗಿದೆ. ಒಟ್ಟು 1.76 ಲಕ್ಷ ಉದ್ಯೋಗಿಗಳು ಬಿಎಸ್ಎನ್​ಎ​ಲ್‌ನಲ್ಲಿ ದುಡಿಯುತ್ತಿದ್ದು, ಸುಮಾರು 54,000 ಸಿಬ್ಬಂದಿ ವಿಆರ್‌ಎಸ್‌ ಪಡೆಯುವ ಸಾಧ್ಯತೆ ಇದೆ.

ಸಂಗ್ರಹ ಚಿತ್ರ

By

Published : Apr 7, 2019, 8:22 AM IST

ನವದೆಹಲಿ:ಆರ್ಥಿಕ ಸಂಕಷ್ಟದಿಂದ ಪಾರಾಗಲು ಹರಸಹಾಸ ಪಡುತ್ತಿರುವ ಸಾರ್ವಜನಿಕ ವಲಯದ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​​ಎಲ್​​ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್​ಎಸ್​) ಅನುಷ್ಠಾನಕ್ಕೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಬಗ್ಗೆ ಎರಡೂ ಟೆಲಿಕಾಂ ಕಂಪನಿಗಳ ಅಧಿಕಾರಿಗಳು ಪ್ರಧಾನಿಯವರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದು, ವಿಆರ್‌ಎಸ್‌ ಅನುಷ್ಠಾನದ ಕುರಿತು ಚರ್ಚಿಸಿದ್ದಾರೆ.

ದೂರ ಸಂಪರ್ಕ ಇಲಾಖೆ ಕೆಲವೇ ದಿನಗಳಲ್ಲಿ ವಿಆರ್‌ಎಸ್‌ ಆಯ್ಕೆ ಕುರಿತು ಸಂಪುಟ ಟಿಪ್ಪಣಿ ರಚಿಸಲಿದೆ. ಇದಕ್ಕಾಗಿ ಚುನಾವಣಾ ಆಯೋಗದ ಅನುಮೋದನೆ ಪಡೆಯಲಿದ್ದು, ವಿಆರ್‌ಎಸ್‌ಗೆ ನಿಧಿ ಸಂಗ್ರಹಿಸಲು ಬಾಂಡ್‌ಗಳನ್ನು ಬಿಡುಗಡೆಗೊಳಿಸುವುದೆಂದು ಎದುರು ನೋಡಲಾಗುತ್ತಿದೆ.

ಬಿಎಸ್​ಎನ್​ಎಲ್​ 2017-18ರಲ್ಲಿ ₹ 8,000 ಕೋಟಿ ನಷ್ಟಕ್ಕೀಡಾಗಿತ್ತು. ಎಂಟಿಎನ್‌ಎಲ್‌ ₹ 3,000 ಕೋಟಿ ನಷ್ಟ ಅನುಭವಿಸತ್ತು. ಉಭಯ ಕಂಪನಿಗಳಿಗೆ ಉದ್ಯೋಗಿಗಳ ವೇತನ ವಿತರಣೆಯೇ ದೊಡ್ಡ ಮೊತ್ತವಾಗುತ್ತಿದೆ. ಬಿಎಸ್​​ಎನ್​ಎಲ್​ ತನ್ನ ಒಟ್ಟು ಆದಾಯದಲ್ಲಿ ಶೇ 65ರಿಂದ 70ರಷ್ಟನ್ನು ಸಿಬ್ಬಂದಿ ವೇತನಕ್ಕೆ ಪಾವತಿಸುತ್ತಿದೆ.

ABOUT THE AUTHOR

...view details