ಕರ್ನಾಟಕ

karnataka

ETV Bharat / business

ಹೊಂದಾಣಿಕೆಯ ಆದಾಯ ಬಾಕಿ ಪಾವತಿ : ಏರ್​ಟೆಲ್ ಹಾದಿ ಹಿಡಿದ ವೊಡಾಫೋನ್-ಐಡಿಯಾ - ಎಜಿಆರ್​ ಇತ್ತೀಚಿನ ಸುದ್ದಿ

ಇದು ಬಡ್ಡಿ, ದಂಡ ಮತ್ತು ದಂಡದ ಮೇಲಿನ ಬಡ್ಡಿ ಹೇರಿಕೆಯಿಂದಾಗಿ ಒಟ್ಟು ಅಸಲು ಮೊತ್ತದ ಮೇಲೆ ನಾಲ್ಕು ಪಟ್ಟು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ. ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಟೆಲಿಕಾಂ ಆಪರೇಟರ್‌ಗಳಿಗೆ ಎಜಿಆರ್ ಬಾಕಿ ಪಾವತಿಸಲು 10 ವರ್ಷ ಅವಕಾಶ ನೀಡಿತು..

Vodafone
ವೊಡಾಫೋನ್

By

Published : Jan 8, 2021, 3:17 PM IST

ನವದೆಹಲಿ :ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಲೆಕ್ಕಾಚಾರದ ಮೌಲ್ಯಮಾಪನಕ್ಕೆ ಸಂಬಂಧ ಭಾರ್ತಿ ಏರ್‌ಟೆಲ್ ಸುಪ್ರೀಂಕೋರ್ಟ್‌ ಮೊರೆಹೋದ ಒಂದು ದಿನದ ಬಳಿಕ, ವೊಡಾಫೋನ್ ಐಡಿಯಾ ಸಹ ಎಜಿಆರ್ ಮೌಲ್ಯಮಾಪನದಲ್ಲಿ ತಿದ್ದುಪಡಿ ಕೋರಿ ಉನ್ನತ ನ್ಯಾಯಾಲಯದ ಕದತಟ್ಟಿದೆ.

ಇಲಾಖೆ ನೀಡಿರುವ ಎಜಿಆರ್ ಬೇಡಿಕೆಗಳಲ್ಲಿ ಕಂಪನಿ ಮಾಡಿದ ಪಾವತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಟಿಲಿಕಾಂ ಕಂಪನಿ ಗುರುವಾರ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದೆ. ಎಜಿಆರ್ ಬೇಡಿಕೆಗಳಲ್ಲಿ ಕೆಲ ಆದಾಯದ ವಸ್ತುಗಳ ಮೇಲೆ ದ್ವಿಗುಣ ಎಣಿಕೆ ಮಾಡಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಇನ್​ಕಮ್ ಟ್ಯಾಕ್ಸ್​ ರಿಟರ್ನ್ಸ್​ಗೆ ಜ.10 ಕಡೆ ದಿನ : ಫೈಲಿಂಗ್​ ವೇಳೆ ಈ ತಪ್ಪುಗಳನ್ನ ಮಾಡದಿರಿ!

ಪಿಎಸ್‌ಟಿಎನ್‌ಗೆ ಸಂಬಂಧಿಸಿದ ಕರೆ ಶುಲ್ಕಗಳಿಗೆ ಮತ್ತು ಇತರ ಆಪರೇಟರ್‌ಗಳಿಗೆ ನೈಜ ಪಾವತಿ ರೋಮಿಂಗ್ ಶುಲ್ಕಗಳಿಗೆ ಕಡಿತ ನೀಡಲಾಗಿಲ್ಲ ಎಂದಿದೆ. ಈ ದೋಷಕ್ಕೆ ಕಾರಣವಾಗಿರುವ ಅರ್ಜಿದಾರರ ಮೇಲಿನ ಹೆಚ್ಚುವರಿ ಬೇಡಿಕೆಯು 5,932 ಕೋಟಿ ರೂ. ಮೂಲ ಮೊತ್ತವಾಗಿದೆ.

ಇದು ಬಡ್ಡಿ, ದಂಡ ಮತ್ತು ದಂಡದ ಮೇಲಿನ ಬಡ್ಡಿ ಹೇರಿಕೆಯಿಂದಾಗಿ ಒಟ್ಟು ಅಸಲು ಮೊತ್ತದ ಮೇಲೆ ನಾಲ್ಕು ಪಟ್ಟು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ. ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಟೆಲಿಕಾಂ ಆಪರೇಟರ್‌ಗಳಿಗೆ ಎಜಿಆರ್ ಬಾಕಿ ಪಾವತಿಸಲು 10 ವರ್ಷ ಅವಕಾಶ ನೀಡಿತು.

ವೊಡಾಫೋನ್ ಐಡಿಯಾದ ಒಟ್ಟು ಎಜಿಆರ್ ಬಾಕಿ 58,254 ಕೋಟಿ ರೂ.ಯಷ್ಟಿದೆ. ಕಂಪನಿಯ ಪ್ರಕಾರ ಬಾಕಿ ಮೊತ್ತ 21,533 ಕೋಟಿ ರೂ. ಎಂದಿದೆ. ಕಂಪನಿಯು ಈವರೆಗೆ 7,854 ಕೋಟಿ ರೂ. ಮೌಲ್ಯದ ಎಜಿಆರ್ ಬಾಕಿ ಪಾವತಿಸಿದೆ.

ABOUT THE AUTHOR

...view details