ಮುಂಬೈ:ಆನ್ಲೈನ್ ಮತ್ತು ಟೆಕ್ನಾಲಜಿ ಸಂಬಂಧಿತ ಫಿನ್‌ಟೆಕ್ ವೇಗವರ್ಧನೆಗೆ ಐಸಿಐಸಿಐ ಬ್ಯಾಂಕ್ ತನ್ನ 'ವೀಸಾ ಇನ್ ಎ ಬಾಕ್ಸ್' ಕಾರ್ಯಕ್ರಮದಲ್ಲಿ ಡಿಜಿಟಲ್ ಪಾವತಿ ದೈತ್ಯ ವೀಸಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಗ್ರಾಹಕರ ಪಾವತಿ ಅರ್ಜಿಗಳ ವೇಗದ ವಿಲೇವಾರಿ, ಪರೀಕ್ಷೆ ಮತ್ತು ನಿಯೋಜಿಸಲು ಫಿನ್‌ಟೆಕ್ ಹಾಗೂ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳು (ಎಪಿಐ) ವೀಸಾ ಮತ್ತು ಐಸಿಐಸಿಐ ಬ್ಯಾಂಕ್ನ ಡೆವಲಪರ್ ಸ್ಯಾಂಡ್‌ಬಾಕ್ಸ್ ಅನ್ನು ಪ್ರವೇಶಿಸಬಹುದು ಎಂದು ವೀಸಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ಸುಧಾರಣಾ ನೀತಿಗಳಿಂದ ಚಾಲ್ತಿ ಖಾತೆ ಏರಿಕೆ ಆಗಲಿದೆ: ಮುಖ್ಯ ಆರ್ಥಿಕ ಸಲಹೆಗಾರರ ವಿಶ್ವಾಸ
ಭಾರತದಲ್ಲಿ 'ವೀಸಾ ಇನ್ ಎ ಬಾಕ್ಸ್' ಕಾರ್ಯಕ್ರಮಕ್ಕಾಗಿ ವೀಸಾ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ಮೊದಲ ಬ್ಯಾಂಕ್ ಐಸಿಐಸಿಐ ಆಗಿದೆ.
ಒಪ್ಪಂದದ ಭಾಗವಾಗಿ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ ಭಾರತದಲ್ಲಿ ತಮ್ಮ ಪ್ರಿಪೇಯ್ಡ್ ಕಾರ್ಡ್ ನೀಡುವ ಕಾರ್ಯಕ್ರಮ ಪ್ರಾರಂಭಿಸಲು ಫಿನ್‌ಟೆಕ್‌ಗಳಿಗೆ ನೆರವಾಗಲು ಒಗ್ಗೂಡಿವೆ. ಅಭಿವೃದ್ಧಿ ಹೊಂದುತ್ತಿರುವ ಫಿನ್‌ಟೆಕ್ ಬಳಕೆ, ಸಮುದಾಯದಲ್ಲಿ ಹೊಸತನವನ್ನು ವೇಗಗೊಳಿಸಲು ಬ್ಯಾಂಕ್ ತನ್ನ ಹಣಕಾಸು ತಂತ್ರಜ್ಞಾನ, ಮಾರುಕಟ್ಟೆ ಪರಿಣತಿ ಮತ್ತು ಪಾವತಿಯಂತಹ ಪರಿಹಾರ ಒದಗಿಸಲಿದೆ ಎಂದು ಹೇಳಿದೆ.