ನವದೆಹಲಿ:ಲಂಡನ್ನಲ್ಲಿ ಇರುವಾಗ ನನ್ನಿಂದ ಸಾಲ ಮರು ವಶಪಡಿಸಿಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಕೀಲರಿಗೆ ಖರ್ಚುಮಾಡಿದ ವೆಚ್ಚವನ್ನು ಬಹಿರಂಗ ಪಡಿಸಲು ಆರ್ಟಿಐ ಅರ್ಜಿ ಹಾಕುವಂತೆ ಭಾರತೀಯ ಮಾಧ್ಯಮಗಳಿಗೆ ದೇಶ ತೊರೆದ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಒತ್ತಾಯಿಸಿದ್ದಾರೆ.
'ಮಾಧ್ಯಮಗಳು ಸಂವೇದನೆಯ ತಲೆಬರಹಗಳನ್ನು ಪ್ರೀತಿಸುತ್ತಿರುವಾಗ, ಇಂಗ್ಲೆಂಡ್ನಲ್ಲಿ ನನ್ನಿಂದ ಸಾಲ ಮರುಪಡೆಯಲು ನ್ಯಾಯಯುತವಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದ ಎಸ್ಬಿಐಗೆ ಏಕೆ ಕೇಳುವುದಿಲ್ಲ? ಭಾರತದಲ್ಲಿ ಶೇ 100ರಷ್ಟು ಪಾವತಿಸುವ ಸಮ್ಮತಿಸಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
'ಇಂಗ್ಲೆಂಡ್ನಲ್ಲಿ ನನಗೆ ಸೇರಿದ್ದ ಸ್ವತ್ತುಗಳನ್ನು ಮಾರಲಾಯಿತು. ಆದರೆ, ಮಾರಾಟದ ಮೌಲ್ಯ ಶೇ 50ರಷ್ಟು ಹೊಂದಿದೆ. ಉಳಿದ ಆಸ್ತಿಗಳ ಮಾರಾಟ ಮಾಡಲು ಕಾನೂನು ವೆಚ್ಚ ಒಳಗೊಂಡಿರುವುದಿಲ್ಲ. ಹಾಗಿದ್ದರೇ ಇದ್ದೆಲ್ಲ ಏನು? ಇಂಗ್ಲೆಂಡ್ ವಕೀಲರನ್ನು ಶ್ರೀಮಂತರನ್ನಾಗಿ ಮಾಡಲು ಈ ರೀತಿ ಮಾಡಲಾಯಿತೇ ಎಂದು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ಎಸ್‌ಬಿಐ ವಕೀಲರು ನನ್ನ ವಿರುದ್ಧ ನೆಪ ಇಟ್ಟುಕೊಂಡು ತಮ್ಮ ಸಾಧನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದು ಭಾರತೀಯ ತೆರಿಗೆ ಪಾವತಿಯ ವೆಚ್ಚದಲ್ಲಿ. ಭಾರತದಲ್ಲಿನ ವಸೂಲಿ ಬಗ್ಗೆ ಸ್ವತಃ ಪ್ರಧಾನಿ ಅವರೇ ದೃಢಪಡಿಸಿದ್ದಾರೆ ಎಂದು ಟ್ವೀಟಿಸಿದ್ದಾರೆ.
ವಿಜಯ್ ಮಲ್ಯ ಎಸ್‌ಬಿಐ, ಐಡಿಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯುನೈಟೆಡ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ಗಳಿಂದ ಒಟ್ಟು ಸಾಲ ₹ 7,484 ಕೋಟಿ ಸಾಲ ಪಡೆದಿದ್ದಾರೆ. ಪಡೆದ ಸಾಲ ಮರು ಪಾವತಿಸದೆ ವಿದೇಶಕ್ಕೆ ಪಲಾಯನಗೈದಿದ್ದಾರೆ.