ಕರ್ನಾಟಕ

karnataka

By

Published : Jul 3, 2019, 6:08 PM IST

ETV Bharat / business

ಪುತ್ರ ಸಿದ್ಧಾರ್ಥ್​ ಜತೆಗೆ ಸಿಗರೇಟ್​ ಸೇದುತ್ತಲೇ ಲಂಡನ್​ ಹೈಕೋರ್ಟ್​ಗೆ ಬಂದ ಮಲ್ಯ

ಕಳೆದ ವರ್ಷದ ಡಿಸೆಂಬರ್​ನಲ್ಲಿ ಗಡಿಪಾರು ಸಂಬಂಧ ವಿಚಾರಣೆ ನಡೆಸಿದ್ದ ವೆಸ್ಟ್​ಮಿನ್​​​ಸ್ಟರ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ, ವಿಜಯ್​ ಮಲ್ಯ ಸಾಲ ತೀರಿಸದೇ ದೇಶ ಬಿಟ್ಟು ಬಂದಿರುವುದಕ್ಕೆ ಸಾಕ್ಷ್ಯಾಧಾರಗಳಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡಿಸೆಂಬರ್​ನಲ್ಲಿ ಆದೇಶ ನೀಡಿತ್ತು.

ಪುತ್ರ ಸಿದ್ಧಾರ್ಥ್​ ಜತೆಗೆ ಲಂಡನ್​ ಹೈಕೋರ್ಟ್​ಗೆ ಬಂದ ವಿಜಯ್​ ಮಲ್ಯ

ಲಂಡನ್​:ಮದ್ಯದ ಉದ್ಯಮಿ/ ದೇಶ ತೊರೆದ ಆರ್ಥಿಕ ಅಪರಾಧಿ ವಿಜಯ್ ಮಲ್ಯ ತಮ್ಮ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆಗೆ ಲಂಡನ್ ಹೈಕೋರ್ಟ್​ಗೆ ವಿಚಾರಣೆಗೆ ಹಾಜರಾಗಿದ್ದರು.

ಕಳೆದ ವರ್ಷದ ಡಿಸೆಂಬರ್​ನಲ್ಲಿ ಗಡಿಪಾರು ಸಂಬಂಧ ವಿಚಾರಣೆ ನಡೆಸಿದ್ದ ವೆಸ್ಟ್​ಮಿನ್​​ಸ್ಟರ್​​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ, ವಿಜಯ್​ ಮಲ್ಯ ಸಾಲ ತೀರಿಸದೇ ದೇಶ ಬಿಟ್ಟು ಬಂದಿರುವುದಕ್ಕೆ ಸಾಕ್ಷ್ಯಾಧಾರಗಳಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡಿಸೆಂಬರ್​ನಲ್ಲಿ ಆದೇಶ ನೀಡಿತ್ತು.

ಪುತ್ರ ಸಿದ್ಧಾರ್ಥ್​ ಜತೆಗೆ ಲಂಡನ್​ ಹೈಕೋರ್ಟ್​ಗೆ ಬಂದ ವಿಜಯ್​ ಮಲ್ಯ

ಈ ಗಡಿಪಾರು ಆದೇಶದ ವಿರುದ್ಧ ಮಲ್ಯ ಲಂಡನ್​ ಹೈಕೋರ್ಟ್​ನ ದ್ವಿಸದಸ್ಯ ಪೀಠದ ಮುಂದೆ ಏಪ್ರಿಲ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಜುಲೈ 2ರಂದು ಅರ್ಜಿಯನ್ನು ಪರಿಶೀಲಿಸಿದ ದ್ವಿಸದಸ್ಯ ಪೀಠವು ವಿಚಾರಣೆಗೆ ಅಂಗೀಕರಿಸಿತ್ತು. ಅರ್ಜಿಯ ವಿಚಾರಣೆ ಇಂದಿನಿಂದ ಆರಂಭವಾಗಿದ್ದು, ವಿಜಯ್​ ಮಲ್ಯ ಅವರೊಂದಿಗೆ ಪುತ್ರ ಸಿದ್ಧಾರ್ಥ್​ ಕೋರ್ಟ್​ಗೆ ಹಾಜರಾಗಿದ್ದರು.

ಕಪ್ಪು ಕೋಟು, ಶ್ವೇತ ವರ್ಣದ ಅಂಗಿ ಹಾಗೂ ಟೈ ಧರಿಸಿ ​ಉದ್ಯಮಿ ಗತ್ತಿನಲ್ಲಿ ಬಂದ ಮಲ್ಯ, ಸಿಗರೇಟ್​ ಸೇದುತ್ತಾ ಕೆಲಹೊತ್ತು ಕೋರ್ಟ್​ ಮುಂಭಾಗದಲ್ಲಿ ನಿಂತರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

For All Latest Updates

TAGGED:

ABOUT THE AUTHOR

...view details