ಕರ್ನಾಟಕ

karnataka

ETV Bharat / business

ರುಪೇ ಕಾರ್ಡ್​ ಬಳಸಿ 16,000 ರೂ. ಕ್ಯಾಶ್​ ಬ್ಯಾಕ್​ ಗೆಲ್ಲಿ... ಆದ್ರೆ, ಒಂದು ಕಂಡಿಷನ್..! - Business News

ಇಂಟರ್​ನ್ಯಾಷನಲ್​ ರುಪೇ ಕಾರ್ಡ್​ ಬಳಕೆಯ ಗ್ರಾಹಕರು ವಹಿವಾಟಿನಲ್ಲಿ ಶೇ 40ರಷ್ಟು ಕ್ಯಾಶ್​ ಬ್ಯಾಕ್​ ಆಫರ್​ ಪಡೆಯಬಹುದು. ಈ ಕೊಡುಗೆಯನ್ನು ಆಯ್ದೆ ರಾಷ್ಟ್ರಗಳಿಗೆ ಮಾತ್ರ ಅನ್ವಯವಾಗಲಿದೆ. ಯುಎಇ, ಸಿಂಗಾಪೂರ, ಶ್ರೀಲಂಕಾ, ಅಮೆರಿಕ, ಸ್ಪೇನ್​, ಸ್ವಿಟ್ಜರ್​ಲ್ಯಾಂಡ್​ ಮತ್ತು ಥೈಲ್ಯಾಂಡ್​ ರಾಷ್ಟ್ರಗಳಲ್ಲಿನ ಪಾಯಿಂಟ್ ಆಫ್ ಸೇಲ್​ (ಪಿಒಎಸ್​) ವಹಿವಾಟುಗಳಿಗೆ ಅನ್ವಯಿಸಲಿದೆ.

RuPay
ರುಪೇ ಕಾರ್ಡ್​

By

Published : Jan 2, 2020, 7:06 PM IST

ನವದೆಹಲಿ:ಅಂತಾರಾಷ್ಟ್ರೀಯ ರುಪೇ ಕಾರ್ಡ್​ ಬಳಕೆದಾರರಿಗೆ ಪ್ರಸ್ತುತ 'ರುಪೇ ಟ್ರಾವಲ್​ ಟೆಲಸ್​'ನಡಿ ಜಾಗತಿಕ ಆಫರ್​ ಒಂದನ್ನು ನೀಡಲಾಗಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ತಿಳಿಸಿದೆ.

ಗ್ರಾಹಕರು ಇಂಟರ್​ನ್ಯಾಷನಲ್​ ರುಪೇ ಕಾರ್ಡ್​ ಬಳಕೆಯ ಮೇಲೆ ಶೇ 40ರಷ್ಟು ಕ್ಯಾಶ್​ ಬ್ಯಾಕ್​ ಆಫರ್​ ಪಡೆಯಬಹುದು. ಈ ಕೊಡುಗೆಯನ್ನು ಆಯ್ದೆ ರಾಷ್ಟ್ರಗಳಿಗೆ ಮಾತ್ರ ಅನ್ವಯವಾಗಲಿದೆ. ಯುಎಇ, ಸಿಂಗಾಪುರ, ಶ್ರೀಲಂಕಾ, ಅಮೆರಿಕ, ಸ್ಪೇನ್​, ಸ್ವಿಟ್ಜರ್​ಲ್ಯಾಂಡ್​ ಮತ್ತು ಥೈಲ್ಯಾಂಡ್​ ರಾಷ್ಟ್ರಗಳಲ್ಲಿನ ಪಾಯಿಂಟ್ ಆಫ್ ಸೇಲ್​ (ಪಿಒಎಸ್​) ವಹಿವಾಟುಗಳಿಗೆ ಅನ್ವಯಿಸಲಿದೆ.

ಗ್ರಾಹಕರು ಕನಿಷ್ಠ 1,000 ರೂ. ಆದರೂ ಪಾವತಿಸಬೇಕು. ಕ್ಯಾಶ್​ ಬ್ಯಾಕ್​ನ ಗರಿಷ್ಠ ಮೊತ್ತವು 4,000 ರೂ.ಯಿದ್ದು, ಒಂದು ತಿಂಗಳಲ್ಲಿ ನಾಲ್ಕು ಬಾರಿ ಕ್ಯಾಶ್​ ಬ್ಯಾಕ್​ ಪಡೆಯುವ ಅವಕಾಶವಿದೆ. ಒಟ್ಟಾರಿ ಮಾಸಿಕ 16,000 ರೂ.ವರೆಗೂ ಪಡೆಯಬಹುದು. ಹೆಚ್ಚು - ಹೆಚ್ಚು ಬಳಸಿದಂತೆ ಹೆಚ್ಚು ಕ್ಯಾಶ್​ ಪಡೆಯುವ ಸುವರ್ಣಾವಕಾಶ ಇದೆ.

ರುಪೇ ಡಿಸ್ಕವರ್​ ಫೈನಾನ್ಸಿಯಲ್​ ಸರ್ವೀಸ್​ (ಡಿಎಫ್​ಎಸ್​) ಹಾಗೂ ಜಪಾನ್​ ಮೂಲದ ಜೆಸಿಬಿ ಇಂಟರ್​ನ್ಯಾಷನಲ್​ ಜೊತೆಗೂಡಿ 190 ರಾಷ್ಟ್ರಗಳಲ್ಲಿ ಕಾರ್ಡ್​ ಪಾವತಿ ಸೇವೆಯನ್ನು ಕಲ್ಪಿಸುತ್ತಿವೆ. ಪ್ರಸ್ತುತ ಎಸ್​ಬಿಐ, ಎಚ್​ಡಿಎಫ್​​ಸಿ, ಆ್ಯಕ್ಸಸ್​​ ಬ್ಯಾಂಕ್ ಸೇರಿ ಒಟ್ಟು ​1,100 ಬ್ಯಾಂಕ್​ಗಳಿಗೆ ಕಾರ್ಡಿಂಗ್ ಸೇವೆ ನೀಡುತ್ತಿವೆ.

ABOUT THE AUTHOR

...view details