ನವದೆಹಲಿ:ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಆರ್ಥಿಕ ನೀತಿಯನ್ನು ಘೋಷಿಸಲಿದೆ ಎಂಬ ವಿಚಾರ ಈಗ ವಿಶ್ವದ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಮಾರ್ಚ್ನಿಂದ ಬಡ್ಡಿದರಗಳು ಏರಿಕೆ ಕಾಣಲಿವೆ ಎಂಬ ಮಾಹಿತಿ ಭಾರತೀಯ ಷೇರುಪೇಟೆ ಮೇಲೂ ಪರಿಣಾಮವನ್ನುಂಟು ಮಾಡಿದೆ.
ಗುರುವಾರದ ಮುಂಬೈ ಷೇರುಮಾರುಕಟ್ಟೆ 57,276 ಅಂಕಗಳೊಂದಿಗೆ ವ್ಯವಹಾರವನ್ನು ಮುಗಿಸಿದೆ. ಶೇ 1 ರಷ್ಟು ಕುಸಿದು ಅಂದರೆ 581 ಅಂಕಗಳ ನಷ್ಟ ಕಂಡಿದೆ. ಇನ್ನು ಗುರುವಾರದ ವ್ಯವಹಾರದ ಆರಂಭದಲ್ಲೇ 17 ಸಾವಿರದ ಗಡಿಯಿಂದ ಕೆಳಕ್ಕಿಳಿದಿದ್ದ ನಿಫ್ಟಿ, ದಿನದಾಂತ್ಯಕ್ಕೆ 167 ಅಂಕ ಕಳೆದುಕೊಂಡು 17110 ಪಾಯಿಂಟ್ಗಳೊಂದಿಗೆ ದಿನದ ವಹಿವಾಟು ಮುಗಿಸಿತು.
ಬುಧವಾರ ಸಭೆ ನಡೆಸಿದ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಬಡ್ಡಿದರ ಏರಿಕೆ ಮಾಡುವ ಬಗ್ಗೆ ನಿರ್ಧರಿಸಿವೆ ಎನ್ನಲಾಗಿದೆ. ಇದು ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಲವು ಕಂಪನಿಗಳು ನಷ್ಟ ಅನುಭವಿಸಿದರೆ, ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಬೆಲೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ