ಕರ್ನಾಟಕ

karnataka

ETV Bharat / business

'ಕ್ಯಾಪಿಟಲ್ ಹಿಂಸಾಚಾರ ನಾಚಿಕೆಗೇಡಿನ ಸಂಗತಿ'... ಯುಎಸ್​​ ಉದ್ಯಮಿಗಳ ಖಂಡನೆ

ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಪರಾಜಯವನ್ನು ಒಪ್ಪಿಕೊಳ್ಳದೆ, ಅವರ ಬೆಂಬಲಿಗರು ವಾಶಿಂಗ್ಟನ್ ಡಿಸಿಯ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದಕ್ಕೆ ಅಮೆರಿಕದ ಉದ್ಯಮ ದಿಗ್ಗಜರು ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ.

US Capitol violence
ಕ್ಯಾಪಿಟಲ್ ಹಿಂಸಾಚಾರ

By

Published : Jan 7, 2021, 1:20 PM IST

Updated : Jan 7, 2021, 1:25 PM IST

ವಾಷಿಂಗ್ಟನ್​:ವಾಷಿಂಗ್ಟನ್ ಡಿಸಿಯಲ್ಲಿರುವ ಅಮೆರಿಕದ ಕ್ಯಾಪಿಟಲ್ (ಸಂಸತ್​) ಕಟ್ಟಡದ ಮೇಲೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಳಿ ಮತ್ತು ಪೊಲೀಸರೊಂದಿಗೆ ಸಂಘರ್ಷವನ್ನು ಉದ್ಯಮ ದಿಗ್ಗಜರು ತೀವ್ರವಾಗಿ ಖಂಡಿಸಿದ್ದಾರೆ.

ತಂತ್ರಜ್ಞಾನ ದೈತ್ಯ ಐಬಿಎಂ ಅಧ್ಯಕ್ಷ ಮತ್ತು ಸಿಇಒ ಅರವಿಂದ ಕೃಷ್ಣ ಹಿಂಸಾಚಾರದ ಬಗ್ಗೆ ಖಂಡನೆ ವ್ಯಕ್ತಪಡಿಸಿ, ಇಂತಹ ಘರ್ಷಣೆಗಳು ತಕ್ಷಣವೇ ಕೊನೆಗೊಳ್ಳಬೇಕು. ಈ ನಡೆಗಳಿಗೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಇಂತಹವುಗಳು ಅಂತ್ಯ ಆದಾಗಲೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಕಾರ್ಯನಿರ್ವಹಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಚುನಾಯಿತ ನಾಯಕರು ಹಿಂಸಾಚಾರವನ್ನು ಕೊನೆಗೊಳಿಸಲು ಚುನಾವಣೆ ಫಲಿತಾಂಶ ಸ್ವೀಕರಿಸಲಿ. ನಮ್ಮ ಪ್ರಜಾಪ್ರಭುತ್ವವು ನೂರಾರು ವರ್ಷಗಳಿಂದ ಹೊಂದಿರುವಂತಹ ಶಾಂತಿಗೆ ಬೆಂಬಲ ನೀಡುವುದು ಎಲ್ಲರ ಜವಾಬ್ದಾರಿ ಎಂದು ಜೆಪಿ ಮೋರ್ಗನ್ ಚೇಸ್ ಸಿಇಒ ಜೇಮಿ ಡಿಮೊನ್ ಹೇಳಿದ್ದಾರೆ.

ಈ ದಾಳಿಯಿಂದ ಅಸಹ್ಯಗೊಂಡಿದ್ದಾಗಿ ಹೇಳಿದ ಸಿಟಿಗ್ರೂಪ್ ಸಿಇಒ ಮೈಕೆಲ್ ಕಾರ್ಬಟ್ ಅವರು, ಈ ದೃಶ್ಯಗಳನ್ನು ನೋಡುವುದಕ್ಕೆ ನನಗೆ ತುಂಬಾ ಕಷ್ಟವಾದರೂ ನಮ್ಮ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಅವರ ಕಾರ್ಯಗಳಿಗೆ ಜನರು ಜವಾಬ್ದಾರರಾಗಿರುತ್ತಾರೆ ಎಂದಿದ್ದಾರೆ.

ಆ್ಯಪಲ್ ಸಿಇಒ ಟಿಮ್ ಕುಕ್ ಕೂಡ್ ಟ್ವೀಟ್ ಮಾಡಿ, ಇಂದು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ದುಃಖಕರ ಮತ್ತು ನಾಚಿಕೆಗೇಡಿನ ಅಧ್ಯಾಯವಾಗಿದೆ. ಈ ದಂಗೆಗೆ ಕಾರಣರಾದವರನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಚುನಾಯಿತ ಅಧ್ಯಕ್ಷ ಬೈಡನ್ ಆಡಳಿತಕ್ಕೆ ನಾವು ಪರಿವರ್ತನೆಯನ್ನು ಪೂರ್ಣಗೊಳಿಸಬೇಕು. ನಮ್ಮ ಆದರ್ಶಗಳು ಹೆಚ್ಚು ಮುಖ್ಯವೆಂದು ಅವರಿಗೆ ತಿಳಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಓಪನಿಂಗ್​ನಲ್ಲೇ ದ್ವಿಶತಕ ಬಾರಿಸಿದ ಸೆನ್ಸೆಕ್ಸ್​: ಎಡವಿ ಬಿದ್ದು ಮೇಲೆದ್ದ ಗೂಳಿ!

Last Updated : Jan 7, 2021, 1:25 PM IST

ABOUT THE AUTHOR

...view details