ಕರ್ನಾಟಕ

karnataka

By

Published : Mar 6, 2020, 6:00 PM IST

Updated : Mar 6, 2020, 6:56 PM IST

ETV Bharat / business

ಯೆಸ್​ ಬ್ಯಾಂಕ್​ನ ಈಗಿನ ಬಿಕ್ಕಟ್ಟಿಗೆ ಡಾ.ಸಿಂಗ್​ ಸರ್ಕಾರ ಉತ್ತರಿಸಬೇಕು: ನಿರ್ಮಲಾ ಸೀತಾರಾಮನ್

2014ರ ಮೊದಲಿನಿಂದಲೂ ಕೆಲವು ಕಾರ್ಪೊರೇಟ್‌ಗಳು ಹಣಕಾಸಿನ ಒತ್ತಡದಲ್ಲಿದ್ದವು. ಅವುಗಳು ಸಾರ್ವಜನಿಕ ವಲಯದಲ್ಲಿ ಇರುವುದರಿಂದ ಅವರ ಹೆಸರುಗಳನ್ನು ತೆಗೆದುಕೊಳ್ಳಲು ಈಗ ಮನಸ್ಸಿಲ್ಲ ಎಂದರು.

Nirmala Sitharaman
ನಿರ್ಮಲಾ ಸೀತಾರಾಮನ್

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಯೆಸ್ ಬ್ಯಾಂಕ್‌ನಲ್ಲಿ ನಡೆದ ಸಂಗತಿಗಳಿಗೆ ಉತ್ತರಿಸಲಾಗುವುದಿಲ್ಲ. ಈಗ ಸಂಭವಿಸಿದ ಸಂಗತಿಗಳ ಬಗ್ಗೆ (ಎನ್‌ಡಿಎ ಅಧಿಕಾರಾವಧಿ) ನಾನು ಉತ್ತರಗಳನ್ನು ನೀಡುತ್ತಿದ್ದೇನೆ. ಜತೆಗೆ ಆರ್‌ಬಿಐ ಉತ್ತರಗಳನ್ನು ನೀಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಈ ಸಮಸ್ಯೆಗೆ (ಯೆಸ್ ಬ್ಯಾಂಕ್‌) ಕಾರಣವಾದದ್ದನ್ನು ಮತ್ತು ಅದರ ಹಿಂದಿನ ಜನರ ಬಗ್ಗೆ ತಿಳಿಸುವಂತೆ ನಾನು ನಿಯಂತ್ರಕರನ್ನು (ಆರ್‌ಬಿಐ) ಕೇಳಿದ್ದೇನೆ. 2014ರ ಮೊದಲಿನಿಂದಲೂ ಕೆಲವು ಕಾರ್ಪೊರೇಟ್‌ಗಳು ಹಣಕಾಸಿನ ಒತ್ತಡದಲ್ಲಿದ್ದವು. ಅವುಗಳು ಸಾರ್ವಜನಿಕ ವಲಯದಲ್ಲಿ ಇರುವುದರಿಂದ ಅವರ ಹೆಸರುಗಳನ್ನು ತೆಗೆದುಕೊಳ್ಳಲು ಈಗ ಮನಸ್ಸಿಲ್ಲ ಎಂದರು.

ಯೆಸ್​ ಬ್ಯಾಂಕ್ ಬಿಕ್ಕಟ್ಟಿಗೆ ಏನು ಕಾರಣವಾಯಿತು ಎಂಬುದನ್ನು ನಾವು ಕಂಡುಹಿಡಿಯಬೇಕು. ಯೆಸ್​ ಬ್ಯಾಂಕಿನ ಠೇವಣಿ ಮತ್ತು ಹೊಣೆಗಾರಿಕೆಗಳು ಮೊದಲಿನಂತೆ ಮುಂದುವರಿಯುತ್ತವೆ. ಒಂದು ವರ್ಷದವರೆಗೆ ಉದ್ಯೋಗಿಗಳಿಗೆ ಸಂಬಳದ ಭರವಸೆಯನ್ನು ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ನೀಡಿದರು.

Last Updated : Mar 6, 2020, 6:56 PM IST

ABOUT THE AUTHOR

...view details