ಕರ್ನಾಟಕ

karnataka

ETV Bharat / business

ಉಬರ್​ ಸೇವೆ ಪಡೆದ ಗ್ರಾಹಕರಿಗೆ 5 ಲಕ್ಷ ರೂ. ಅಪಘಾತ ವಿಮೆ... ಆಸ್ಪತ್ರೆ ವೆಚ್ಚ ಹೇಗೆ? - ಉಬರ್​

ಉಬರ್​ನ ಪ್ರಯಾಣ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯ ಉಂಟಾದರೆ ಸಂತ್ರಸ್ತರಿಗೆ ನೇರವಾಗಿ ವಿಮೆಯ ಮೂಲಕ 5 ಲಕ್ಷ ರೂ. ನೀಡಲಿದೆ. ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ.ವರೆಗೆ ವಿಮೆ ವೆಚ್ಚ ಕಲ್ಪಿಸಲಿದೆ. ಇದರಲ್ಲಿ ಒಪಿಡಿ ಮೊತ್ತ 50,000 ರೂ. ಒಳಗೊಂಡಿರುತ್ತದೆ. ಕಾರು ಪ್ರಯಾಣಿಕ ಸೇವೆ ಪಡೆಯುವವರಿಗೆ 'ಭಾರತಿ ಎಎಕ್ಸ್​ಎ' ವಿಮೆ ಒದಗಿಸಿದರೇ ಆಟೋ ಮತ್ತು ಮೋಟಾರ್​ ಸೈಕಲ್​ ಸೇವಾದಾರರಿಗೆ 'ಟಾಟಾ ಎಐಜಿ' ಕಂಪನಿ ನೀಡಲಿದೆ.

ಸಾಂದರ್ಭಿಕ ಚಿತ್ರ

By

Published : Sep 25, 2019, 7:00 PM IST

ನವದೆಹಲಿ:ಅಮೆರಿಕ ಮೂಲದ ಬಾಡಿಗೆ ಪ್ರಯಾಣಿಕ ಸೇವೆ ಒದಗಿಸುವ ಉಬರ್​​, ತನ್ನ ಸೇವೆ ನೀಡುವೆ ವೇಳೆ ಯಾವುದೇ ವಿಧದ ಅಪಘಾತ ಸಂಭವಿಸಿದರೇ ಗ್ರಾಹಕರಿಗೆ ವಿಮಾ ಸೌಲಭ್ಯವನ್ನು ಒದಗಿಸಲಿದೆ.

ಪ್ರಯಾಣ ಸಂದರ್ಭದಲ್ಲಿ ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯತೆ ಸಂಭವಿಸಿದರೇ ಸಂತ್ರಸ್ತರಿಗೆ ನೇರವಾಗಿ ವಿಮೆಯ ಮೂಲಕ 5 ಲಕ್ಷ ರೂ. ನೀಡಲಿದೆ. ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ.ವರೆಗೆ ವಿಮೆ ವೆಚ್ಚ ಕಲ್ಪಿಸಲಿದೆ. ಇದರಲ್ಲಿ ಒಪಿಡಿ ಮೊತ್ತ 50,000 ರೂ. ಒಳಗೊಂಡಿರುತ್ತದೆ.

ಉಬರ್​ ಭಾರತದಲ್ಲಿ 40ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾರು, ಆಟೋ ಮತ್ತು ಮೋಟಾರ್​ ಸೈಕಲ್​ನಂತಹ ಪ್ರಯಾಣಿಕ ಸೇವೆಗಳನ್ನು ನೀಡುತ್ತಿದೆ. ಕಾರು ಪ್ರಯಾಣಿಕ ಸೇವೆ ಪಡೆಯುವವರಿಗೆ 'ಭಾರತಿ ಎಎಕ್ಸ್​ಎ' ವಿಮೆ ಒದಗಿಸಿದರೇ ಆಟೋ ಮತ್ತು ಮೋಟಾರ್​ ಸೈಕಲ್​ ಸೇವಾದಾರರಿಗೆ ಟಾಟಾ ಎಐಜಿ ಕಂಪನಿ ನೀಡಲಿದೆ.

ಉಬರ್​ ಸೇವೆ ಪಡೆಯುವ ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ. ವಿಮಾ ಮೂಲಕ ಅವರ ಸುರಕ್ಷಿತ ಪ್ರಯಾಣವನ್ನು ಖಾತ್ರಿ ಪಡಿಸುತ್ತಿದ್ದೇವೆ. ಕೆಲವು ವಿಮಾ ಕಂಪನಿಗಳನ್ನು ನಮ್ಮ ಸುರಕ್ಷತೆಯ ಪಾಲುದಾರರನ್ನಾಗಿ ಮಾಡಿಕೊಂಡಿದ್ದೇವೆ. ನಮ್ಮ ಸೇವೆಯಲ್ಲಿ ಅಪಘಾತ ಸಂಭವಿಸುವುದು ತೀರ ನಗಣ್ಯ. ಆದರೂ ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಉಬರ್​ ಕೇಂದ್ರ ನಿರ್ವಹಣೆ ವಿಭಾಗದ ಮುಖ್ಯಸ್ಥ ಪವನ್ ವೈಶಿ ಹೇಳಿದ್ದಾರೆ.

ABOUT THE AUTHOR

...view details