ನವದೆಹಲಿ: ಮಾಧ್ಯಮ ಕಾರ್ಯನಿರ್ವಾಹಕ ಉದಯ್ ಶಂಕರ್ ಅವರು 2020 - 2021ರ ಫಿಕ್ಕಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಉದ್ಯಮ ಸಂಸ್ಥೆ ತಿಳಿಸಿದೆ.
ಪ್ರಸ್ತುತ, ಶಂಕರ್ ದಿ ವಾಲ್ಟ್ ಡಿಸ್ನಿ ಕಂಪನಿ ಎಪಿಎಸಿ ಅಧ್ಯಕ್ಷ ಮತ್ತು ಸ್ಟಾರ್ ಅಂಡ್ ಡಿಸ್ನಿ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಅಪೋಲೋ ಆಸ್ಪತ್ರೆಗಳ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗಿತಾ ರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.
2020ರ ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ ಶಂಕರ್ ತನ್ನ ಏಷ್ಯಾ ಪೆಸಿಫಿಕ್ ವ್ಯವಹಾರದ ಅಧ್ಯಕ್ಷ ಮತ್ತು ಸ್ಟಾರ್ ಆ್ಯಂಡ್ ಡಿಸ್ನಿ ಇಂಡಿಯಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ವಾಲ್ಟ್ ಡಿಸ್ನಿ ಕಂಪನಿ ಇತ್ತೀಚೆಗೆ ತಿಳಿಸಿತ್ತು. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ ಅವರು ಫಿಕ್ಕಿಯ ಹಿರಿಯ ಉಪಾಧ್ಯಕ್ಷರಾಗಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ.