ಕರ್ನಾಟಕ

karnataka

ETV Bharat / business

ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷರಾಗಿ ಉದಯ್ ಕೋಟಕ್ ಪದಗ್ರಹಣ.. - ಸಿಐಐ ಉದ್ಯಮಿ ಒಕ್ಕೂಟ

ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ/ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರು 2020-21ರ ಸಿಐಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಬಜಾಜ್ ಫಿನ್‌ಸರ್ವ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಅವರು 2020-21ರ ಸಿಐಐ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Kotak Mahindra Bank CEO Uday Kotak
ಉದಯ್ ಕೋಟಕ್

By

Published : Jun 3, 2020, 5:58 PM IST

ನವದೆಹಲಿ :ಕೋಟಕ್ ಮಹೀಂದ್ರಾ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ/ಸಿಇಒ ಉದಯ್ ಕೋಟಕ್ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಉದ್ಯಮ ಸಂಸ್ಥೆ 2020-21ನೇ ಸಾಲಿನ ಹೊಸ ಪದಾಧಿಕಾರಿಗಳನ್ನು ಬುಧವಾರ ಪ್ರಕಟಿಸಿದೆ. ಕೋಟಕ್ ಅವರು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ/ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಕೋಟಕ್ ಅವರು ಕಳೆದ ಎರಡು ದಶಕಗಳಿಂದ ಸಿಐಐನೊಂದಿಗೆ ಗುರುತಿಸಿಕೊಂಡಿದ್ದಾರೆ. ಸಿಐಐ ಆರ್ಥಿಕ ವ್ಯವಹಾರಗಳ ಮಂಡಳಿ, ಹಣಕಾಸು ವಲಯ ಅಭಿವೃದ್ಧಿ ಮಂಡಳಿ, ಸೇವಾ ಮಂಡಳಿ, ಕಾರ್ಪೊರೇಟ್ ಆಡಳಿತ ಮಂಡಳಿ, ಬ್ಯಾಂಕಿಂಗ್ ಸಮಿತಿ, ಬಂಡವಾಳ ಮಾರುಕಟ್ಟೆಗಳ ಸಮಿತಿ ಮತ್ತು ಹಣಕಾಸು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ.

ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ/ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರು 2020-21ರ ಸಿಐಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಬಜಾಜ್ ಫಿನ್‌ಸರ್ವ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಅವರು 2020-21ರ ಸಿಐಐ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ABOUT THE AUTHOR

...view details