ಸ್ಯಾನ್ ಫ್ರಾನ್ಸಿಸ್ಕೊ:ರೈಡ್ ಹೇಲಿಂಗ್ ಅಪ್ಲಿಕೇಷನ್ ಉಬರ್ ಸುಮಾರು 3,700 ಉದ್ಯೋಗಿಗಳನ್ನು ಜೂಮ್ ಕರೆಗಳ ಮೂಲಕ ವಜಾಗೊಳಿಸಿದೆ. ಪ್ರತಿ ಕರೆ ಮೂರು ನಿಮಿಷಗಳಿಗಿಂತಲೂ ಕಡಿಮೆ ಕಾಲದಲ್ಲಿದ್ದು, 'ಇಂದು ಉಬರ್ ಜೊತೆಗೆ ನಿಮ್ಮ ಕೊನೆಯ ಕೆಲಸದ ದಿನ' ಎಂಬ ಸಾಮಾನ್ಯ ಸಂದೇಶದ ಮೂಲಕ ತೆಗೆದು ಹಾಕಿದೆ.
ಕಳೆದ ವಾರ ಉಬರ್ ಟೆಕ್ನಾಲಜೀಸ್ ಸುಮಾರು 3,700 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಕೋವಿಡ್-19 ಸೋಂಕು ಕಂಪನಿಯ ವ್ಯವಹಾರದ ಮೇಲೆ ತೀವ್ರ ಪ್ರಭಾವ ಉಂಟುಮಾಡಿದ್ದು, ಆರ್ಥಿಕ ಸವಾಲು ಎದುರಿಸಲು ನಿರ್ವಹಣಾ ವೆಚ್ಚ ಕಡಿತಕ್ಕೆ ಉಬರ್ ನಿರ್ಧರಿಸಿದೆ.