ಕರ್ನಾಟಕ

karnataka

ETV Bharat / business

ಡೆಲ್, ಮೈಂಡ್‌ಟ್ರೀಯ ಇಬ್ಬರು ಟೆಕ್ಕಿಗಳಿಗೆ ಕೊರೊನಾ ಪತ್ತೆ... ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ - ವಾಣಿಜ್ಯ ಸುದ್ದಿ

ಅಮೆರಿಕಾದ ಟೆಕ್ಸಾಸ್​ನಲ್ಲಿರುವ ರೌಂಡ್​ ಕ್ಲಾಕ್​ ಮುಖ್ಯ ಕಚೇರಿಗೆ ಇಬ್ಬರು ಉದ್ಯೋಗಿಗಳು ಭೇಟಿ ನೀಡಿದ್ದರು. ಇಬ್ಬರನ್ನೂ ಕೋವಿಡ್ 19 ಪರೀಕ್ಷೆಗೊಳಪಡಿಸಿದ್ದೆವು. ಅವರಲ್ಲಿ ಓರ್ವನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನೋರ್ವನಿಗೆ ಋಣಾತ್ಮಕ ವರದಿ ಬಂದಿದೆ ಎಂದು ಡೆಲ್​ ಹೇಳಿದೆ.

Coronavirus
ಕೊರೊನಾ

By

Published : Mar 11, 2020, 5:47 PM IST

Updated : Mar 11, 2020, 6:06 PM IST

ನವದೆಹಲಿ :ಡೆಲ್ ಹಾಗೂ ಮೈಂಡ್‌ ಟ್ರೀ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಇಬ್ಬರೂ ಟೆಕ್ಕಿಗಳಿಗೆ ಕೊರೊನಾ ವೈರಸ್ ಇರುವಿಕೆ ದೃಢಪಟ್ಟಿದೆ ಎಂದು ಉಭಯ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಡೆಲ್​ ಕಂಪನಿಯ ಉದ್ಯೋಗಿ ಒಬ್ಬರು ಅಮೆರಿಕಾದ ಟೆಕ್ಸಾಸ್​ಗೆ ಭೇಟಿ ನೀಡಿ ಬಂದಿದ್ದು, ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಮೈಂಡ್ ಟ್ರೀಯ ನೌಕರ ಸಹ ವಿದೇಶಕ್ಕೆ ಭೇಟಿ ನೀಡಿದ್ದಾರೆ. ಅವರಿಗೂ ಕೋವಿಡ್​-19 ಇರುವಿಕೆ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಎರಡೂ ಕಂಪನಿಗಳು ಪ್ರತ್ಯೇಕ ಪ್ರಕಟಣೆಯಲ್ಲಿ ಹೇಳಿವೆ.

ಡೆಲ್ ಇಂಡಿಯಾ ಕಂಪನಿಯ ಪತ್ರಿಕಾ ಪ್ರಕಟಣೆ..

ಅಮೆರಿಕಾದ ಟೆಕ್ಸಾಸ್​ನಲ್ಲಿರುವ ರೌಂಡ್​ ಕ್ಲಾಕ್​ ಮುಖ್ಯ ಕಚೇರಿಗೆ ಇಬ್ಬರು ಉದ್ಯೋಗಿಗಳು ಭೇಟಿ ನೀಡಿದ್ದರು. ಇಬ್ಬರನ್ನೂ ಕೋವಿಡ್ 19 ಪರೀಕ್ಷೆಗೊಳಪಡಿಸಿದ್ದೆವು. ಅವರಲ್ಲಿ ಓರ್ವನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನೋರ್ವನಿಗೆ ಋಣಾತ್ಮಕ ವರದಿ ಬಂದಿದೆ ಎಂದು ಡೆಲ್​ ಹೇಳಿದೆ.

ಸಾಗರೋತ್ತರ ಪ್ರವಾಸ ಹೋಗಿದ್ದ ಉದ್ಯೋಗಿಯನ್ನು ಮಾರ್ಚ್​ 9ರಂದು ಕೋವಿಡ್​-19 ಪರೀಕ್ಷೆಗೊಳಪಡಿಸಿದ್ದೆವು. ಅವರಿಗೆ ಸೋಂಕು ಇರುವುದು ಖಚಿತವಾಗಿದೆ. ಉದ್ಯೋಗಿ ಹಾಗೂ ಅವರ ಕುಟುಂಬಸ್ಥರನ್ನು ವೈದ್ಯಕೀಯ ಕಣ್ಗಾವಲಿನಲ್ಲಿರಿಸಲಾಗಿದೆ. ಎಲ್ಲ ವಿಧದ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸಲಾಗುತ್ತಿದೆ. ಸೋಂಕಿತನು ಸ್ವಇಚ್ಛೆಯಿಂದ ಮೈಂಡ್​ ಟ್ರೀ ಕಚೇರಿಗೆ ಭೇಟಿ ನೀಡುವುದಾಗಲಿ ಅಥವಾ ಯಾರನ್ನೂ ಭೇಟಿ ಮಾಡುವುದಾಗಲಿ ಮಾಡಿಲ್ಲ ಎಂದು ಕಂಪನಿಯು ಹೇಳಿದೆ.

Last Updated : Mar 11, 2020, 6:06 PM IST

ABOUT THE AUTHOR

...view details