ಹೈದರಾಬಾದ್ :ಸಿಕ್ಕಿಂ ಮತ್ತು ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ALC) ಯಲ್ಲಿ ಚೀನಾ ತಗಾದೆ ತೆಗೆಯುತ್ತಿದೆ. ಈ ವೇಳೆ ಚೀನಿ ಸರಕುಗಳನ್ನು ನಿಷೇಧಿಸುವಂತೆ ಅಭಿಯಾನ ನಡೆಯುತ್ತಿದೆ. ಇದರ ಸೂಚಕವಾಗಿ ಅಮೂಲ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಅಮೂಲ್ ಖಾತೆಯಲ್ಲಿ ಬ್ಲಾಕ್ ಮಾಡಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಟ್ವಿಟರ್ ಇಂಕ್ ಅಮೂಲ್ ಖಾತೆಯನ್ನು ಅನ್‌ಬ್ಲಾಕ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತಕ್ಕಾಗಿ ಕರೆ ನೀಡಿದರು. ಭಾರತದ ಭಿನ್ನಾಭಿಪ್ರಾಯದ ನಡುವೆ ಚೀನಾದ ಸರಕುಗಳ ವಿರುದ್ಧ ಹೆಚ್ಚುತ್ತಿರುವ ಭಾವನೆಗಳನ್ನು ಕೇಂದ್ರೀಕರಿಸಿ ಅಮೂಲ್ ಟ್ವೀಟ್ ಮಾಡಿತ್ತು.