ಕರ್ನಾಟಕ

karnataka

ETV Bharat / business

ಡೆಸ್ಕ್​ಟಾಪ್​ಗೂ ಬರಲಿದೆ ಟ್ವಿಟರ್​ ಆಡಿಯೋ Chat ಫೀಚರ್​ - ಲೆಟೆಸ್ಟ್ ಟೆಕ್ ನ್ಯೂಸ್​

ಐಫೋನ್‌ ಐಒಎಸ್​ನಲ್ಲಿನ ಸಣ್ಣ ಗುಂಪಿನ ಜನರೊಂದಿಗೆ ಅದರ ಆಡಿಯೋ ಚಾಟ್ ಫೀಚರ್​ ಮೊದಲು ಪರೀಕ್ಷಿಸಿದ ನಂತರ, ಟ್ವಿಟರ್ ಕಳೆದ ತಿಂಗಳು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷೆ ವಿಸ್ತರಿಸಲಾಗುತ್ತಿದೆ. ಆಡಿಯೋ ಸಂಭಾಷಣೆ, ಲೈವ್, ಹೋಸ್ಟ್​ನಲ್ಲಿ ಮಾತನಾಡಲು ಅವಕಾಶ ನೀಡುತ್ತದೆ ಎಂದು ಕಳೆದ ತಿಂಗಳು ಹೇಳಿತ್ತು.

ಆಡಿಯೋ ಚಾಟ್ ಫೀಚರ್​
ಆಡಿಯೋ ಚಾಟ್ ಫೀಚರ್​

By

Published : Apr 2, 2021, 6:38 PM IST

ನವದೆಹಲಿ:ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಪರೀಕ್ಷಾ ಹಂತದಲ್ಲಿ ಲಭ್ಯವಿರುವ, ಟ್ವಿಟರ್‌ನ ಸ್ಪೇಸಸ್ ಎಂಬ ಹೊಸ ಕ್ಲಬ್‌ಹೌಸ್ ತರಹದ ಆಡಿಯೊ ಚಾಟ್ ರೂಮ್‌ ಫೀಚರ್​, ಶೀಘ್ರದಲ್ಲೇ ಡೆಸ್ಕ್‌ಟಾಪ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ.

ಅಪ್ಲಿಕೇಷನ್ ಸಂಶೋಧಕ ಜೇನ್ ಮಂಚುನ್ ವಾಂಗ್, ವೆಬ್ ಆವೃತ್ತಿಯಲ್ಲಿ ಸ್ಪೇಸ್‌ ಬಿಡುಗಡೆಯ ಬಗ್ಗೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಟ್ವಿಟರ್ ವೆಬ್ ಅಪ್ಲಿಕೇಷನ್​ಗಾಗಿ ಟ್ವಿಟರ್ ಸ್ಪೇಸ್ ಪೂರ್ವವೀಕ್ಷಣೆ ಕಾರ್ಡ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವೀಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಡಿಯೋ ಚಾಟ್ ಫೀಚರ್​

ಐಒಎಸ್​ನಲ್ಲಿನ ಸಣ್ಣ ಗುಂಪಿನ ಜನರೊಂದಿಗೆ ಅದರ ಆಡಿಯೋ ಚಾಟ್ ಫೀಚರ್​ ಮೊದಲು ಪರೀಕ್ಷಿಸಿದ ನಂತರ, ಟ್ವಿಟರ್ ಕಳೆದ ತಿಂಗಳು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷೆ ವಿಸ್ತರಿಸಲಾಗುತ್ತಿದೆ. ಆಡಿಯೋ ಸಂಭಾಷಣೆ, ಲೈವ್, ಹೋಸ್ಟ್​ನಲ್ಲಿ ಮಾತನಾಡಲು ಅವಕಾಶ ನೀಡುತ್ತದೆ ಎಂದು ಕಳೆದ ತಿಂಗಳು ಹೇಳಿತ್ತು.

ಪ್ರಸ್ತುತ ಈ ಫೀಚರ್ ದೇಶದ ಅಪ್ಲಿಕೇಷನ್‌ನ ಬೀಟಾ ಪ್ರೋಗ್ರಾಂ ಭಾಗವಾಗಿರುವ ಆಯ್ದ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೆ ಆರಂಭಿಕ ಪೂರ್ವವೀಕ್ಷಣೆಯಾಗಿ ಲಭ್ಯವಿದೆ. ಫೀಚರ್​ನಲ್ಲಿ ಬಳಕೆದಾರರು ತಮ್ಮ ಅನುಯಾಯಿಗಳು ಸಂವಾದದಲ್ಲಿ ಭಾಗವಹಿಸಲು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕೋವಿಡ್​ ಲಸಿಕೆ ರಫ್ತಿಗೆ ನಿಷೇಧ ಹೇರಿಲ್ಲ: ವಿದೇಶಾಂಗ ಇಲಾಖೆ ಸ್ಪಷ್ಟನೆ

ಟ್ವಿಟರ್​ನಲ್ಲಿರುವ ಯಾರಾದರೂ ಸಂಭಾಷಣೆ ಆಲಿಸಬಹುದು. ಆದರೆ, ಯಾರು ಮಾತನಾಡಬೇಕೆಂಬುದನ್ನು ಹೋಸ್ಟ್ ಮಾತ್ರ ನಿಯಂತ್ರಿಸಬಹುದು. ಇನ್ವೈಟ್ ಓನ್ಲಿ, ಆಡಿಯೊ-ಚಾಟ್ ಅಪ್ಲಿಕೇಷನ್ ಕ್ಲಬ್‌ಹೌಸ್ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಸಮಯದಲ್ಲಿ ಈ ಫೀಚರ್​ ಬರುತ್ತದೆ.

ಆಡಿಯೋ ಚಾಟ್ ಫೀಚರ್​ ಹೀಗಿರಲಿದೆ..

ಲಿಂಕ್ಡ್ಇನ್ ಮತ್ತು ಸ್ಪಾಟಿಫೈನಂತಹ ಟೆಕ್ ಕಂಪನಿಗಳು ಸಹ ಕ್ಲಬ್​ಹೌಸ್ ತರಹದ ಲೈವ್ ಆಡಿಯೊ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಫೇಸ್​ಬುಕ್ ಸಹ ಅಂತಹ ಫೀಚರ್​ನಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ.

ABOUT THE AUTHOR

...view details