ಸ್ಯಾನ್ಫ್ರಾನ್ಸಿಸ್ಕೋ:ಟ್ವಿಟರ್ ಎಲ್ಲ ವಿಧದ ರಾಜಕೀಯ ಜಾಹೀರಾತುಗಳನ್ನು ಜಾಗತಿಕವಾಗಿ ನಿಲ್ಲಿಸಲು ನಿರ್ಧರಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜ್ಯಾಕ್ ಡಾರ್ಸೆ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಜ್ಯಾಕ್, ಕಂಪನಿಯ ನಿಲುವು ರಾಜಕೀಯ ಸಂದೇಶವನ್ನು ತಲುಪಬೇಕು ಮತ್ತು ಅವುಗಳನ್ನು ಖರೀದಿಸಬಾರದು. ಜನರು ಇನ್ನೊಬ್ಬರ ಖಾತೆಯನ್ನು ಅನುಸರಿಸಲು ಅಥವಾ ರಿಟ್ವೀಟ್ ಮಾಡುತ್ತಿದ್ದಂತೆ ರಾಜಕೀಯ ಸಂದೇಶಗಳು ಹರಡುತ್ತವೆ ಎಂದಿದ್ದಾರೆ.
ವಾಣಿಜ್ಯ ಜಾಹೀರಾತುದಾರರಿಗೆ ಲಾಭದಾಯಕ ಆಗಿರುವ ಇಂಟರ್ನೆಟ್, ರಾಜಕೀಯ ಜಾಹೀರಾತುಗಳು ನಂಬಿಕೆಗೆ ಅರ್ಹವಲ್ಲ. ಇದು ರಾಜಕೀಯಕ್ಕೆ ಗಮನಾರ್ಹ ಅಪಾಯಗಳನ್ನು ತಂದೊಡ್ಡಲಿದೆ. ಲಕ್ಷಾಂತರ ಮತದಾರರ ಮೇಲೆ ಪ್ರಭಾವ ಬೀರಿ ಅವರನ್ನು ತಪ್ಪು ದಾರಿಗೆ ಎಳೆಯಬಹುದು. ಉದ್ದೇಶ ಪೂರ್ವಕವಾಗಿ ತಪ್ಪು ದಾರಿಗೆ ತರುವ ರಾಜಕೀಯ ಜಾಹೀರಾತುಗಳನ್ನು ಬಳಸದೇ ಇರಲು ನಿರ್ಧರಿಸಿದ್ದೇವೆ ಎಂದು ಜ್ಯಾಕ್ ಬರೆದುಕೊಂಡಿದ್ದಾರೆ.