ಕರ್ನಾಟಕ

karnataka

ETV Bharat / business

ವಿತ್ತ ಸಚಿವೆಯ ಕೆಣಕಿ ಧನ್ಯವಾದ ಅರ್ಪಿಸಿದ ಕಿರಣ್ ಮಜುಂದಾರ್ ಶಾ - Kiran Mazumdar Shaw's

ಇ-ಸಿಗರೇಟ್​ ನಿಷೇಧವು ಆರೋಗ್ಯ ಸಚಿವಾಲಯದಿಂದ ಏಕೆ ಬರಲಿಲ್ಲ? ಆರ್ಥಿಕ ಸುಧಾರಣೆಗೆ ನಿಮ್ಮ ಕ್ರಮಗಳೇನು ಎಂದು ಕಿರಣ್ ಮಜುಂದಾರ್ ಶಾ ಹಣಕಾಸು ಸಚಿವ ನಿರ್ಮಲಾ ಸೀತಾರಾನಮನ್ ಅವರನ್ನು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ. ಇದಕ್ಕೆ ವಿತ್ತ ಸಚಿವೆ ಪ್ರತಿಕ್ರಿಯಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Sep 19, 2019, 6:30 PM IST

ನವದೆಹಲಿ: ಕೆಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಇ-ಸಿಗರೇಟ್​ ನಿಷೇಧದ ಘೋಷಣೆಯ ಕುರಿತು ಪ್ರಕಟಿಸಿದ್ದರು. ಈ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಮಜುಂದಾರ್, ಇ-ಸಿಗರೇಟ್​ ನಿಷೇಧಿಸಲಾಗುವುದು ಎಂದು ಸೀತಾರಾಮನ್ ಹೇಳುತ್ತಿದ್ದಾರೆ. ಆದರೆ, ಈ ಘೋಷನೆ ಆರೋಗ್ಯ ಸಚಿವಾಲಯದಿಂದ ಏಕೆ ಬರಲಿಲ್ಲ? ಅದೇ ರೀತಿಯಾಗಿ ಗುಟ್ಕಾ ಹೇಗೆ ನಿಷೇಧಿಸುತ್ತೀರಿ? ಮತ್ತು ಆರ್ಥಿಕ ಚೇತರಿಕೆಗೆ ಸಂಬಂಧಿಸಿದಂತೆ ಕ್ರಮಗಳೇನು? ಎಂದೆಲ್ಲಾ ಪ್ರಶ್ನಿಸಿದ್ದಾರೆ.

ಕಿರಣ್ ಮಜುಂದಾರ್ ಶಾ ಟ್ವೀಟ್​

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತಾರಾಮನ್, ಕಿರಣ್ ಜೀ, ಕೆಲವು ವಿಷಯಗಳು, ಈ ಸುದ್ದಿಗೋಷ್ಠಿಯು ಸಚಿವ ಸಂಪುಟದ ನಿರ್ಧಾರಗಳಿಗೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಭೆ ನೇತೃತ್ವ ವಹಿಸಿದಾಗ ನಾನು ಸರ್ಕಾರದ ಸಚಿವ ಸಂಪುಟದ ಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದ್ದೆ. ಡಾ. ಹರ್ಷವರ್ಧನ್ (ಆರೋಗ್ಯ ಸಚಿವ) ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಲು ವಿದೇಶದಲ್ಲಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.

ಆರ್ಥಿಕ ಸುಧಾರಣೆಗಳ ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ, ನೀವು ನನ್ನನ್ನು ಗಮನಿಸಿರಬಹುದು. ನಾನು ಆರ್ಥಿಕತೆಯ ವಿಷಯಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ನಿಯಮಿತವಾಗಿ ಮಾತನಾಡುತ್ತಿದ್ದೇನೆ ಎಂದರು,

ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆಗೆ ಸಂತುಷ್ಟರಾದ ಕಿರಣ್ ಮಜುಂದಾರ್ ಶಾ ಅವರು, ನನ್ನ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ನಿಜವಾಗಿಯೂ ಕೃತಜ್ಞರಾಗಿರಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details