ಕರ್ನಾಟಕ

karnataka

ETV Bharat / business

ಡಿಸೆಂಬರ್‌ನಲ್ಲಿ ಟಿವಿಎಸ್ ಮೋಟಾರ್ ಮಾರಾಟ ಶೇ.17.5ರಷ್ಟು ಏರಿಕೆ - ಟಿವಿಎಸ್​​ ಮೋಟಾರ್ ಬೈಕ್​

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸುವ ಕಂಪನಿಯು 2019ರ ಡಿಸೆಂಬರ್‌ನಲ್ಲಿ 2,31,571 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು ಎಂದು ಟಿವಿಎಸ್ ಮೋಟಾರ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

TVS
ಟಿವಿಎಸ್​

By

Published : Jan 2, 2021, 3:32 PM IST

ನವದೆಹಲಿ:ಟಿವಿಎಸ್ ಮೋಟಾರ್ ಕಂಪನಿಯು ಡಿಸೆಂಬರ್‌ ಮಾಸಿಕದಲ್ಲಿ 2,72,084 ಯೂನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇ 17.5ರಷ್ಟು ಬೆಳವಣಿಗೆ ಕಂಡಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸುವ ಕಂಪನಿಯು 2019ರ ಡಿಸೆಂಬರ್‌ನಲ್ಲಿ 2,31,571 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು ಎಂದು ಟಿವಿಎಸ್ ಮೋಟಾರ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟವು 2,58,239 ಯುನಿಟ್ ಆಗಿದ್ದು, 2019ರ ಡಿಸೆಂಬರ್‌ನಲ್ಲಿ 2,15,619 ರಷ್ಟಿತ್ತು. ಈಗಿನ ಮಾರಾಟ ಶೇ 20ರಷ್ಟು ಹೆಚ್ಚಾಗಿದೆ. ದೇಶೀಯ ದ್ವಿಚಕ್ರ ವಾಹನ ಮಾರಾಟವು ಕಳೆದ ತಿಂಗಳು 1,76,912 ಯೂನಿಟ್ ಆಗಿದ್ದು, ಡಿಸೆಂಬರ್‌ನಲ್ಲಿ 1,57,244 ಯುನಿಟ್‌ಗಳಿಗೆ ಹೋಲಿಸಿದರೆ ಇದು ಶೇ 13ರಷ್ಟು ಹೆಚ್ಚಾಗಿದೆ ಎಂದಿದೆ.

ಕಳೆದ ತಿಂಗಳು ಒಟ್ಟು ರಫ್ತು ಶೇ 28ರಷ್ಟು ಏರಿಕೆ ಕಂಡು 94,269ಕ್ಕೆ ತಲುಪಿದೆ. ಇದು ಹಿಂದಿನ ವರ್ಷದ 73,512ರಷ್ಟಿತ್ತು.

ಓದಿ:ರೋಹಿತ್​, ಪಂತ್, ಗಿಲ್​, ಸೈನಿಯ ರೆಸ್ಟೋರೆಂಟ್​ ಬಿಲ್​​​​ ಸೈಲೆಂಟಾಗಿ ಪಾವತಿಸಿದ ಅಭಿಮಾನಿ: ಮುಂದೇನಾಯ್ತು?

ABOUT THE AUTHOR

...view details