ಕರ್ನಾಟಕ

karnataka

ETV Bharat / business

ಲಂಡನ್​ನ ಐಕಾನಿಕ್​ ನಾರ್ಟನ್​ ಬೈಕ್​ ಕಂಪನಿ ಖರೀದಿಸಿದ ಟಿವಿಎಸ್​

1898ರಲ್ಲಿ ಬರ್ಮಿಂಗ್​ಹ್ಯಾಮ್​ನಲ್ಲಿ ಜೇಮ್ಸ್ ಲ್ಯಾನ್ಸ್ ಡೌನ್ ನಾರ್ಟನ್ ಸ್ಥಾಪಿಸಿದ ನಾರ್ಟನ್ ಮೋಟರ್​​​​ ಸೈಕಲ್​​ ಸಾರ್ವಕಾಲಿಕ ಅತ್ಯಂತ ಜನಪ್ರಿಯ ಬ್ರಿಟಿಷ್ ಮೋಟಾರ್​ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ನಾರ್ಟನ್ ಮೋಟಾರ್‌ಸೈಕಲ್‌, ಕ್ಲಾಸಿಕ್ ಮಾದರಿ ಮತ್ತು ಕಮಾಂಡೋ ರೆಟ್ರೊ ಕ್ಲಾಸಿಕ್ ರೀಬೂಟ್‌ಗಳಿಂದ ಹಿಡಿದು 200 ಬಿಎಚ್‌ಪಿ, 1200 ಸಿಸಿ ವಿ 4 ಅಂತಹ ಐಷಾರಾಮಿ ಬೈಕ್​ಗಳಿಗೆ ಹೆಸರುವಾಸಿಯಾಗಿದೆ.

TVS Motor
ಟಿವಿಎಸ್ ಮೋಟಾರ್

By

Published : Apr 18, 2020, 6:52 PM IST

ನವದೆಹಲಿ: ಟಿವಿಎಸ್ ಮೋಟಾರ್ ಕಂಪನಿಯು ಇಂಗ್ಲೆಂಡ್​ ಮೂಲದ ಐಕಾನಿಕ್ ಬೈಕ್ ತಯಾರಕ ನಾರ್ಟನ್ ಮೋಟಾರ್‌ಸೈಕಲ್‌ ಕಂಪನಿಯನ್ನು 16 ಮಿಲಿಯನ್ ಜಿಬಿಪಿಯಷ್ಟು ನಗದು ಪಾವತಿ ಮೂಲಕ (ಸುಮಾರು 153 ಕೋಟಿ ರೂ.) ಸ್ವಾಧೀನಪಡಿಸಿಕೊಂಡಿದೆ.

ಕಂಪನಿಯು ತನ್ನ ಸಾಗರೋತ್ತರ ಅಂಗಸಂಸ್ಥೆಗಳ ಮೂಲಕ ಲಂಡನ್​ನ ಐಕಾನಿಕ್​ ನಾರ್ಟನ್ ಮೋಟಾರ್‌ಸೈಕಲ್‌ (ಇಂಗ್ಲೆಂಡ್​) ಕಂಪನಿಯ ಕೆಲವು ಸ್ವತ್ತುಗಳನ್ನು 16 ಮಿಲಿಯನ್ ಜಿಬಿಪಿ ಹೂಡಿಕೆಯ ಮೂಲಕ ಸ್ವಾಧೀನಪಡಿಸಿಕೊಂಡಿದೆ. ವಹಿವಾಟಿಗೆ ಸಂಬಂಧಿಸಿದ ಎಲ್ಲವನ್ನೂ ನಗದು ಒಪ್ಪಂದ ಮುಖೇನ ತೆಕ್ಕೆಗೆ ತೆಗೆದುಕೊಳ್ಳಲಾಗಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

1898ರಲ್ಲಿ ಬರ್ಮಿಂಗ್​ಹ್ಯಾಮ್​ನಲ್ಲಿ ಜೇಮ್ಸ್ ಲ್ಯಾನ್ಸ್ ಡೌನ್ ನಾರ್ಟನ್ ಸ್ಥಾಪಿಸಿದ ನಾರ್ಟನ್ ಮೋಟಾರ್​​ ಸೈಕಲ್ಸ್​​, ಸಾರ್ವಕಾಲಿಕ ಅತ್ಯಂತ ಜನಪ್ರಿಯ ಬ್ರಿಟಿಷ್ ಮೋಟಾರ್​ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ನಾರ್ಟನ್ ಮೋಟಾರ್‌ಸೈಕಲ್‌, ಕ್ಲಾಸಿಕ್ ಮಾದರಿ ಮತ್ತು ಕಮಾಂಡೋ ರೆಟ್ರೊ ಕ್ಲಾಸಿಕ್ ರೀಬೂಟ್‌ಗಳಿಂದ ಹಿಡಿದು 200 ಬಿಎಚ್‌ಪಿ, 1200 ಸಿಸಿ ವಿ 4 ಅಂತಹ ಐಷಾರಾಮಿ ಬೈಕ್​ಗಳಿಗೆ ಹೆಸರುವಾಸಿಯಾಗಿದೆ.

ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಇದು ನಮಗೆ ಒಂದು ಮಹತ್ವದ ಗಳಿಗೆ. ನಾರ್ಟನ್ ವಿಶ್ವಾದ್ಯಂತ ಅತಿದೊಡ್ಡ ಬ್ರಿಟಿಷ್ ಬ್ರಾಂಡ್ ಆಗಿದ್ದು, ಜಾಗತಿಕವಾಗಿ ಅಪಾರವಾದ ಅವಕಾಶ ಒದಗಿಸಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ತಿಳಿಸಿದ್ದಾರೆ.

ABOUT THE AUTHOR

...view details