ಬೆಂಗಳೂರು:ವಿಶ್ವದಾದ್ಯಂತ ಮೊಬೈಲ್ ಸೇವಾದಾರರ ಫೋನ್ ಸಂಖ್ಯೆ, ಹೆಸರು ಮತ್ತು ಇ-ಮೇಲ್ ವಿಳಾಸಗಳು ಒಳಗೊಂಡಂತೆ ನೋಂದಾಯಿತ ಮೊಬೈಲ್ ಕರೆದಾರರ ಹೆಸರು ಪತ್ತೆಗೆ ನೆರವಾಗುವ 'ಟ್ರೂಕಾಲರ್' ಬಳಕೆದಾರರ (Truecaller) ಡೇಟಾ, ಖಾಸಗಿ ಅಂತರ್ಜಾಲ ತಾಣದಲ್ಲಿ 'ಮಾರಾಟಕ್ಕೆ ಲಭ್ಯವಿದೆ' ಎಂಬ ಮಾಹಿತಿ ಹರಿದಾಡುತ್ತಿದೆ ಎಂದು ವಹಿವಾಟುಗಳ ಮೇಲ್ವಿಚಾರಣೆಯ ಸೈಬರ್ ಸೆಕ್ಯುರಿಟಿ ವಿಶ್ಲೇಷಕರು ಎಚ್ಚರಿಸಿದ್ದಾರೆ.
ಜಾಗತಿಕವಾಗಿ 140 ದಶಲಕ್ಷ ಬಳಕೆದಾರರನ್ನು ಹೊಂದಿರುವ ಟ್ರೂಕಾಲರ್ ಆ್ಯಪ್, ಭಾರತದಲ್ಲೇ ಶೇ 60-70ರಷ್ಟು ಸೇವಾದಾರರನ್ನು ಹೊಂದಿದೆ. ಭಾರತೀಯ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್ ತಾಣವೊಂದು ₹1.5 ಲಕ್ಷಕ್ಕೆ (2,000 ಯೂರೋ) ಮಾರಾಟ ಮಾಡಲಾಗುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಸೈಬರ್ ಸೆಕ್ಯುರಿಟಿ ಎಚ್ಚರಿಕೆ ನೀಡಿದೆ. ಜಾಗತಿಕ ಬಳಕೆದಾರರ ಮಾಹಿತಿಯು ₹ 19.45 ಲಕ್ಷ ( 25,000 ಯೂರೋ) ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು ಸ್ವೀಕೃತಿ ಪ್ರಕ್ರಿಯೆಯ 'ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ)' ವ್ಯವಸ್ಥೆಯ ಸೇವೆಯನ್ನು ಭಾರತೀಯ ಬಳಕೆದಾರರಿಗೆ ಟ್ರೂಕಾಲರ್ ಡೇಟಾ ಅಪ್ಲಿಕೇಷನ್ ಒದಗಿಸುತ್ತಿದೆ. ಬಳಕೆದಾರರು ಅನಧಿಕೃತವಾಗಿ ಡೇಟಾ ನಕಲಿಸುವುದನ್ನು ತಡೆಯೊಡ್ಡುವ ವ್ಯವಸ್ಥೆಯನ್ನು ಕಂಪನಿ ಕಂಡುಹಿಡಿದಿದೆ. ಆ್ಯಪ್ ಬಳಕೆದಾರ ಮೊಬೈಲ್ ನಂಬರ್ಗಳನ್ನು ನಮೂದಿಸಿ ಮತ್ತೊಮ್ಮ ಬಳಕೆದಾರರ ಹೆಸರು ಪಡೆಯಬಹುದಾಗಿದೆ.
ಕೆಲವು ಬಳಕೆದಾರರು ತಮ್ಮ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಇತ್ತೀಚೆಗೆ ಕಂಪನಿಯ ಗಮನಕ್ಕೆ ಬಂದಿದೆ. ವಿವಿಧ ಹಂತದ ವಿಶ್ಲೇಷಣೆಗೆ ಒಳಪಡಿಸಿ ಈ ಬಗ್ಗೆ ದೃಢೀಕರಿಸುತ್ತೇವೆ. ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ಇನ್ನೊಬ್ಬರ ಕೈವಶ ಆಗಲು ಬಿಡುವುದಿಲ್ಲ. ವಿಶೇಷವಾಗಿ ಹಣಕಾಸು ಸೇವಾ ಬಳಕೆದಾರರ ಮಾಹಿತಿಯ ಗೌಪ್ಯತೆ ಕಾಪಾಡಲು ಬದ್ಧರಾಗಿದ್ದೇವೆ ಎಂದು ಟ್ರೂಕಾಲರ್ ವಕ್ತಾರ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.