ಕರ್ನಾಟಕ

karnataka

ETV Bharat / business

ಟೆಸ್ಲಾ ಬಳಿಕ 'ಟ್ರೈಟಾನ್​​ ಎಲೆಕ್ಟ್ರಿಕಲ್​ ವೆಹಿಕಲ್​' ಭಾರತಕ್ಕೆ ಎಂಟ್ರಿ: 21,000 ಜನರಿಗೆ ಉದ್ಯೋಗ - ಭಾರತದಲ್ಲಿ ಟ್ರೈಟಾನ್ ಇವಿ ತಯಾರಕರು

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಹಬ್ ತಯಾರಿಕ ಕೇಂದ್ರವಾಗಿ ಮಾರ್ಪಡುತ್ತಿರುವ ಹಾದಿಯಲ್ಲಿದ್ದು, ಟೆಸ್ಲಾ ಬಳಿಕ ಅಮೆರಿಕದ ಮತ್ತೊಂದು ಕಂಪನಿಯು ಭಾರತದಲ್ಲಿ ತನ್ನ ಅಂಗಸಂಸ್ಥೆಯನ್ನು ನೋಂದಾಯಿಸಿಕೊಂಡಿದೆ. ಇದರಿಂದ 21 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.

Triton Electric
Triton Electric

By

Published : Mar 12, 2021, 12:59 PM IST

ನವದೆಹಲಿ:ಅಮೆರಿಕದ ನ್ಯೂಜೆರ್ಸಿ ಮೂಲದ ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ ಎಲ್ಎಲ್​ಸಿ ತನ್ನ ಅಂಗಸಂಸ್ಥೆಯನ್ನು ಭಾರತದಲ್ಲಿ ನೋಂದಾಯಿಸಿದೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಹಬ್ ತಯಾರಿಕ ಕೇಂದ್ರವಾಗಿ ಮಾರ್ಪಡುತ್ತಿರುವ ಹಾದಿಯಲ್ಲಿದ್ದು, ಟೆಸ್ಲಾ ಬಳಿಕ ಅಮೆರಿಕದ ಮತ್ತೊಂದು ಕಂಪನಿಯು ಭಾರತದಲ್ಲಿ ತನ್ನ ಅಂಗಸಂಸ್ಥೆ ನೋಂದಾಯಿಸಿಕೊಂಡಿದೆ. ಇದರಿಂದ 21 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.

ಎಲೆಕ್ಟ್ರಿಕ್​ ವಾಹನಗಳ ತಯಾರಿಕಾ ವ್ಯವಹಾರ ಚಟುವಟಿಕೆಗಳನ್ನು ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​​​ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಅಮೆರಿಕದ ಹೊರಗೆ ಟ್ರೈಟಾನ್ ಇವಿಗಳಿಗಾಗಿ ಅತಿದೊಡ್ಡ ಮಾರುಕಟ್ಟೆ ನಿರ್ಮಿಸಲು ಅಂಗಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರೈಟಾನ್ ಹೇಳಿದೆ.

ಇದನ್ನೂ ಓದಿ: ಬೈಡನ್​ ಆ ಒಂದು ಸಹಿಗೆ ಮುಂಬೈ ಪೇಟೆಯಲ್ಲಿ ಗೂಳಿ ತಕಧಿಮಿತ!

ಕಂಪನಿಯು ದೇಶದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು, ಇಲ್ಲಿಂದ ದೇಶೀಯ ಮಾರುಕಟ್ಟೆಗೆ ಮಾತ್ರವಲ್ಲದೇ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾಗಳಿಗೆ ವಾಹನಗಳನ್ನು ಪೂರೈಸಲಿದೆ. ಆದರೆ, ಎಷ್ಟು ಹೂಡಿಕೆ ಮಾಡಲಾಗುವುದು? ತಯಾರಿಕ ಘಟಕ ಎಲ್ಲಿ ತಲೆ ಎತ್ತಲಿದೆ? ಅಂತಹ ವಿಷಯಗಳನ್ನು ಇನ್ನೂ ಹೊರಬಿದ್ದಿಲ್ಲ.

ಮುಂದಿನ ಮೂರು ವರ್ಷಗಳಲ್ಲಿ ಈ ಘಟಕವು 21,000 ಉದ್ಯೋಗಗಳನ್ನು ಸೃಷ್ಟಿಸಲಿದೆ. ಭಾರತೀಯ ಮಾರುಕಟ್ಟೆ ನಮಗೆ ಬಹಳ ಮುಖ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಸರ್ಕಾರ ಪ್ರಚಾರ ಮಾಡುತ್ತಿದೆ. ದೇಶೀಯ ರಸ್ತೆಗಳು ಸೇರಿದಂತೆ ವಿಶ್ವದ ಹೆಚ್ಚಿನ ಭಾಗಗಳಿಗೆ ಇವಿಗಳು ಸೂಕ್ತವಾಗಿವೆ ಎಂದು ಟ್ರೈಟಾನ್ ಇವಿ ಸ್ಥಾಪಕ ಮತ್ತು ಸಿಇಒ ಹಿಮಾಂಶು ಬಿ. ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details