ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಸ್ಟೇಷನ್ಗಳಲ್ಲಿ ಕಾಯುವ ಪ್ರಯಾಣಿಕರಿಗೆ ಉಚಿತ ಟಿವಿ ಚಾನಲ್ಗಳ ವೀಕ್ಷಣಾ ಸೇವಯನ್ನು ಶೀಘ್ರದಲ್ಲಿ ಒದಗಿಸಲಿದೆ.
ಪ್ರಯಾಣಿಕರು ರೈಲ್ವೆ ಸ್ಟೇಷನ್‌ನಲ್ಲಿ ಕುಳಿತು ಟಿವಿ ಚಾನಲ್ಗಳು, ಸಿನಿಮಾಗಳು ಹಾಗೂ ಮನರಂಜನೆ ವೀಡಿಯೋಗಳನ್ನು ತಮ್ಮ ಮೊಬೈಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ರೈಲಿಗಾಗಿ ಕಾಯುವ ಸಮಯವನ್ನು ಇನ್ನಷ್ಟು ಸಹನೀಯವಾಗಿಸುವ ನಿಟ್ಟನಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಲು ಇಲಾಖೆ ಚಿಂತಿಸಿದೆ. ಪ್ರಾರಂಭಿಕ ಹಂತದಲ್ಲಿ 1,600 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಮುಂದಿನ 4,700 ಸ್ಟೇಷನ್‌ಗಳಿಗೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ರೈಲ್ಟೆಲ್ ಆ್ಯಪ್ (RailTel) ಸಿದ್ಧಪಡಿಸಿದ್ದು, ಇದರಲ್ಲಿ ಜಾಹೀರಾತು ಪ್ರದರ್ಶಿಸುವ ಮೂಲಕ ರೈಲ್ವೆ ಆದಾಯ ಗಳಿಕೆ ಮಾಡಲಿದೆ.