ಕರ್ನಾಟಕ

karnataka

ETV Bharat / business

ಬಿಡದಿ ಟೊಯೋಟಾ ಕಾರ್ಖಾನೆ ಲಾಕ್‌ಔಟ್: ಯಡಿಯೂರಪ್ಪ ನೆರವು ಕೋರಿದ ಕಂಪನಿ ಉಪಾಧ್ಯಕ್ಷ - Toyota Kirloskar Bidadi plant issue

ವಿಧಾನಸೌಧದ ಸಿಎಂ ಕಚೇರಿಗೆ ಆಗಮಿಸಿದ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಪ್ರಸಕ್ತ ಸಂಸ್ಥೆ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ಸಧ್ಯದ ಸ್ಥಿತಿಗತಿಗಳ ಕುರಿತು ಸಮಾಲೋಚನೆ ನಡೆಸಿತು. ಕಾರ್ಮಿಕರ ಪ್ರತಿಭಟನೆ, ಲಾಕ್​ಔಟ್ ವಿಷಯದ ಕುರಿತು ಸರ್ಕಾರದ ಪರವಾಗಿ ನಡೆಸಿದ ಮಾತುಕತೆ ನಂತರದ ಬೆಳವಣಿಗೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.

Toyota Kirloskar
ಯಡಿಯೂರಪ್ಪ

By

Published : Dec 8, 2020, 4:33 AM IST

ಬೆಂಗಳೂರು:ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್​ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಇತರೆ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ವಿಧಾನಸೌಧದ ಸಿಎಂ ಕಚೇರಿಗೆ ಆಗಮಿಸಿದ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಪ್ರಸಕ್ತ ಸಂಸ್ಥೆ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ಸಧ್ಯದ ಸ್ಥಿತಿಗತಿಗಳ ಕುರಿತು ಸಮಾಲೋಚನೆ ನಡೆಸಿತು. ಕಾರ್ಮಿಕರ ಪ್ರತಿಭಟನೆ, ಲಾಕ್​ಔಟ್ ವಿಷಯದ ಕುರಿತು ಸರ್ಕಾರದ ಪರವಾಗಿ ನಡೆಸಿದ ಮಾತುಕತೆ ನಂತರದ ಬೆಳವಣಿಗೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.

ಕಾರ್ಮಿಕರಿಗೆ ಬೇಗನೆ ಕಾರ್ಖಾನೆಗೆ ಮರಳಲು ಅವಕಾಶ ನೀಡುವಂತೆ ನಿಯೋಗವು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.

ಭಾರತ್ ಬಂದ್ ಬೆಂಬಲಿಸಿ ನಾಳೆ ಕಾಂಗ್ರೆಸ್ ನಾಯಕರ ಸಾಂಕೇತಿಕ ಪ್ರತಿಭಟನೆ

ವಾರ್ಷಿಕ 3,10,000 ಯೂನಿಟ್​ ಉತ್ಪಾದನೆಯ ಬಿಡದಿ ಕಾರ್ಖಾನೆಯ ಘಟಕವು ನವೆಂಬರ್ 10ರಿಂದ ಬಹುತೇಕ ಸ್ಥಗಿತಗೊಂಡಿದೆ, ಇದು ಕಂಪನಿಗೆ ಹೆಚ್ಚು ತೊಂದರೆಗೊಳಗಾಗಿರುವ ತಾಣಗಳಲ್ಲಿ ಒಂದಾಗಿದೆ.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details