ಕರ್ನಾಟಕ

karnataka

ETV Bharat / business

ಕಾರ್ಮಿಕರ ವಜಾ ವಿರೋಧಿಸಿ ಧರಣಿ: ಬಿಡದಿಯ ಟೊಯೋಟಾ ಘಟಕಕ್ಕೆ ಲಾಕ್​ಔಟ್​! - ಟೊಯೋಟಾ ನೌಕರರ ವಜಾ

ಪ್ರಸ್ತುತ ಬಿಗುವಿನ ವಾತಾವರಣದಿಂದಾಗಿ ಮತ್ತು ನೌಕರರ ಸುರಕ್ಷತೆಯನ್ನು ಕಾಪಾಡಲು ಮುಂದಿನ ಸೂಚನೆ ಬರುವವರೆಗೂ ಕಂಪನಿಯು ಬೀಗಮುದ್ರೆ ಘೋಷಿಸಲಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಹೇಳಿದೆ.

Toyota
ಟೊಯೋಟಾ

By

Published : Nov 10, 2020, 4:58 PM IST

ನವದೆಹಲಿ: ಕಾರ್ಮಿಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಕಾರ್ಮಿಕರ ಒಕ್ಕೂಟದ ಸದಸ್ಯರು ಕಾರ್ಖಾನೆಯ ಆವರಣದಲ್ಲಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕರ್ನಾಟಕದ ಬಿಡದಿ ಉತ್ಪಾದನಾ ಕೇಂದ್ರಕ್ಕೆ ಬೀಗಮುದ್ರೆ ಘೋಷಿಸಿದೆ.

ಕಂಪನಿಯ ಬಿಡದಿಯು ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ವರ್ಷಕ್ಕೆ 3.10 ಲಕ್ಷ ಯುನಿಟ್‌ಗಳಷ್ಟು ಕಾರು ಉತ್ಪಾದನೆ ಮಾಡುತ್ತೆ.

ಸಕ್ರಿಯ ಉದ್ಯೋಗಿಗಳ ಭಾಗವಹಿಸುವಿಕೆ ಆಧಾರದ ಮೇಲೆ ಸೌಹಾರ್ದಯುತ ಮತ್ತು ಆರೋಗ್ಯಕರ ಕೆಲಸದ ವಾತಾವರಣ ಮತ್ತು ಶಿಸ್ತು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸಿದ್ದೆವು. ವ್ಯವಸ್ಥಿತ ದುಷ್ಕೃತ್ಯಗಳ ದಾಖಲಾಗಿವೆ. ಉದ್ಯೋಗಿಗಳಲ್ಲಿ ಶಿಸ್ತು ಉಲ್ಲಂಘನೆ ಸ್ವೀಕಾರಾರ್ಹವಲ್ಲದ ನಡವಳಿಕೆಯಾಗಿದೆ. ಕಂಪನಿಯ ಕಾನೂನು ಮತ್ತು ಸೇವಾ ನೀತಿಯ ಉಲ್ಲಂಘನೆ ಆಗಿದೆ ಎಂದು ಟಿಕೆಎಂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಬಿಗುವಿನ ವಾತಾವರಣದಿಂದಾಗಿ ಮತ್ತು ನೌಕರರ ಸುರಕ್ಷತೆಯನ್ನು ಕಾಪಾಡಲು ಮುಂದಿನ ಸೂಚನೆ ಬರುವವರೆಗೂ ಕಂಪನಿಯು ಬೀಗಮುದ್ರೆ ಘೋಷಿಸಲಾಗಿದೆ ಎಂದು ಹೇಳಿದೆ.

ABOUT THE AUTHOR

...view details