ಬೆರಿನಾಗ್:ಮುಂಬೈ ಮೂಲದ ಗೇಮಿಂಗ್ ಕಂಪನಿಯಾದ ಡ್ರೀಮ್ 11 ಫ್ಯಾಂಟಿಸಿಯಲ್ಲಿ 1 ಕೋಟಿ ರೂ. ಗೆದ್ದ ಬೆರಿನಾಗ್ ನಗರ ಪಂಚಾಯಿತಿಯ ಸಫಾಯಿ ಕರ್ಮಚಾರಿ ಟಿಂಕು ಸಿಂಗ್ ಈಗ ಕೋಟ್ಯಧಿಪತಿಯಾಗಿದ್ದಾರೆ.
ಉತ್ತರ ಪ್ರದೇಶದ ರಾಂಪುರದ ನಿವಾಸಿಯಾಗಿದ್ದು, ಮೂವರು ಸಹೋದರರು ಮತ್ತು ನಾಲ್ವರು ಸಹೋದರಿಯರಿದ್ದು, ಕುಟುಂಬದಲ್ಲಿ ಈತನೇ ಕಿರಿಯವನಾಗಿದ್ದಾನೆ.
ಟಿಂಕು ನಿರಂತರವಾಗಿ ಡ್ರೀಮ್- 11 ಪಂದ್ಯಗಳಲ್ಲಿ ಆಟಗಾರರನ್ನು ಆಯ್ಕೆ ಮಾಡಿ, ಕೋಟಿ ರೂ. ಗೆಲ್ಲುವ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ಅಂತಿಮವಾಗಿ ಅದೃಷ್ಟ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾನೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯಕ್ಕಾಗಿ ಆತ ಡ್ರೀಮ್ 11 ಅಪ್ಲಿಕೇಶನ್‌ನಲ್ಲಿ ತನ್ನ ಡ್ರೀಮ್ ತಂಡ ಆಯ್ಕೆ ಮಾಡಿಕೊಂಡಿದ್ದ. ರಾತ್ರಿ 11ರ ಸುಮಾರಿಗೆ ಪಂದ್ಯ ಮುಗಿದ ಬಳಿಕ 1 ಕೋಟಿ ರೂ. ಬಹುಮಾನ ಗೆದಿದ್ದಾರೆ. ರಾತ್ರಿ ವೇಳೆ ಆತ ಈ ಬಗ್ಗೆ ಯಾರಿಗೂ ಮಾಹಿತಿ ನೀಡಲಿಲ್ಲ.
ಬೆಳಗಿನ ವೇಳೆಗೆ 1 ಕೋಟಿ ಗೆಲ್ಲುವಿನ ಬಗ್ಗೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಿದ್ದಾನೆ. ಸ್ಪರ್ಧೆಯಲ್ಲಿ ಗೆದ್ದ ನಂತರ, ಟಿಂಕು ಗುರುವಾರ ಎಂದಿನಂತೆ ತನ್ನ ದಿನದ ಕೆಲಸಕ್ಕೆ ಮರಳಿದ್ದಾನೆ. ನಗರ ಪಂಚಾಯಿತಿಯ ತನ್ನ ಸ್ವಚ್ಛತೆ ಕೆಲಸ ಬಿಟ್ಟುಕೊಡುವುದಿಲ್ಲ ಎಂದು ಟಿಂಕು ಹೇಳಿದ್ದಾನೆ. ಕೋಟಿ ಗೆದ್ದರೂ ತನ್ನ ಕಾಯಕ ಮರೆಯದ ಟಿಂಕುವಿಗೆ ವಿವಿಧ ಸಂಸ್ಥೆಗಳು ಅಭಿನಂದಿಸಿವೆ.