ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಜಾಗತಿಕ ಆರ್ಥಿಕತೆಯ ವಿನಾಶದ ಹೊರತಾಗಿಯೂ ಡೀಲ್ ಸ್ಟ್ರೀಟ್ (ಒಪ್ಪಂದಿತ ವ್ಯವಹಾರ) 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ 7ರಷ್ಟು ಏರಿಕೆಯಾಗಿದೆ. 1,268 ವಹಿವಾಟುಗಳಲ್ಲಿ ಸುಮಾರು 80 ಬಿಲಿಯನ್ ಡಾಲರ್‌ಗಳಿಗೆ (5.90 ಲಕ್ಷ ಕೋಟಿ ರೂ) ತಲುಪಿದ್ದು, ಇದರಲ್ಲಿ ರಿಲಯನ್ಸದೇ ಸಿಂಹಪಾಲು ಹೊಂದಿದೆ.
ಪಿಡಬ್ಲ್ಯೂಸಿ ಇಂಡಿಯಾ ಸಂಗ್ರಹಿಸಿದ ಮಾಹಿತಿ ಪ್ರಕಾರ, ಒಟ್ಟು ಒಪ್ಪಂದದ ಮೂರನೇ ಒಂದು ಭಾಗದಷ್ಟು ರಿಲಯನ್ಸ್ - ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಲಯನ್ಸ್ ರಿಟೇಲ್ ಮೂಲಕವೇ ಬಂದಿದೆ. ರಿಲಯನ್ಸ್ ಜಿಯೋ ಫೇಸ್‌ಬುಕ್ ನೇತೃತ್ವದ 10.2 ಬಿಲಿಯನ್ ಡಾಲರ್ ಮೌಲ್ಯದ ಎಫ್‌ಡಿಐ ಸೆಳೆದರೇ ರಿಲಯನ್ಸ್ ರಿಟೇಲ್ ದ್ವಿತೀಯಾರ್ಧದಲ್ಲಿ ಶತಕೋಟಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪಡೆದುಕೊಂಡಿದೆ. ಇತರ ಸಂಸ್ಥೆಗಳ ಎಫ್‌ಡಿಐ ಪ್ರಮಾಣ ಒಟ್ಟು 3.2 ಬಿಲಿಯನ್ ಡಾಲರ್ನಷ್ಟಿದೆ.
ವಿಲೀನ ಮತ್ತು ಸ್ವಾಧೀನವು ಒಪ್ಪಂದದ ಮೌಲ್ಯ ಶೇ 50ಕ್ಕೂ ಅಧಿಕವಾಗಿದೆ. ಆದರೆ, ಖಾಸಗಿ ಈಕ್ವಿಟಿ (ಪಿಇ) ಚಟುವಟಿಕೆಯು ಕಳೆದ ವರ್ಷದಂತೆ ವೇಗ ಕಾಯ್ದುಕೊಂಡು 38.2 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ದಾಖಲಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ವ್ಯವಹಾರ ಹೊರತುಪಡಿಸಿ, ಮೊದಲಾರ್ಧದಲ್ಲಿ ಹೂಡಿಕೆದಾರರು ತಮ್ಮ ಯೋಜನೆಗಳನ್ನು ತಡೆ ಹಿಡಿದರು. ನಗದು ಸಂರಕ್ಷಣೆಯತ್ತ ಗಮನಕೊಟ್ಟು ನಿಧಾನಗತಿಯ ಹೂಡಿಕೆಯತ್ತ ವಾಲಿದರು. ವರ್ಷದ ಆರಂಭಿಕ ತಿಂಗಳಲ್ಲಿ ಹಲವು ನಿಧಿಗಳು ಎಚ್ಚರಿಕೆಯ ಕಾರ್ಯತಂತ್ರ ಅಳವಡಿಸಿಕೊಂಡವು.