ಬೆಂಗಳೂರು:ರಕ್ಷಣಾ ಸಾರ್ವಜನಿಕ ವಲಯದ ಘಟಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (ಎಚ್‌ಎಎಲ್) ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇಆರ್‌ಪಿ) ಜಾರಿಗೆ 400 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದಾಗಿ ಐಟಿ ಸೇವೆಗಳ ಪ್ರಮುಖ ಟೆಕ್ ಮಹೀಂದ್ರಾ ಲಿಮಿಟೆಡ್ ತಿಳಿಸಿದೆ.
ಇಆರ್‌ಪಿ ವ್ಯವಸ್ಥೆಯ ಜಾರಿ ಮತ್ತು ಅದರ ಬೆಂಬಲದ ಪಾಲುದಾರನಾಗಿ ಬದಲಾವಣೆ ಹಾಗೂ ಆಧುನೀಕರಣಕ್ಕೆ ಟೆಕ್ ಮಹೀಂದ್ರಾ ಜವಾಬ್ದಾರಿ ತೆಗೆದುಕೊಳ್ಳಲಿದೆ. ಎಚ್‌ಎಎಲ್ ತನ್ನ ವ್ಯವಹಾರ ಪ್ರಕ್ರಿಯೆಗಳನ್ನು ಸಂಸ್ಥೆಯಾದ್ಯಂತ ಸುವ್ಯವಸ್ಥಿತಗೊಳಿಸಲು ಮತ್ತು ಪ್ರಮಾಣೀಕರಿಸಲು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎಚ್‌ಎಎಲ್‌ನ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇಆರ್‌ಪಿ) ವ್ಯವಸ್ಥೆಯ ಮಾರ್ಪಾಡು ಮತ್ತು ಆಧುನೀಕರಣದ ಜವಾಬ್ದಾರಿಯನ್ನು ಟೆಕ್ ಮಹೀಂದ್ರಾ ವಹಿಸಲಿದೆ. ಪ್ರಾಜೆಕ್ಟ್ ಪರಿವರ್ತನ್ ಎಂಬುವುದು ಎಚ್‌ಎಎಲ್‌ನ ಕೇಂದ್ರೀಕೃತ ಇಆರ್‌ಪಿ ಸಾಧಿಸಲು ಸಮಗ್ರ ವ್ಯಾಪಾರದ ನೀತಿಯಾಗಿದೆ. ಜಾಗತಿಕವಾಗಿ ಕೈಗಾರಿಕೆಗಳಲ್ಲಿ ಅನುಸರಿಸುತ್ತಿರುವ ಕೆಲವು ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಎಚ್‌ಎಎಲ್‌ಗೆ ಇದು ಅನುವು ಮಾಡಿಕೊಡುತ್ತದೆ.