ಕರ್ನಾಟಕ

karnataka

ETV Bharat / business

ನಂ.1 ಶ್ರೀಮಂತ ಕಿರೀಟ ಕಳೆದುಕೊಂಡ ಮುಖೇಶ್​ ಅಂಬಾನಿಗೆ ಇಂದು ಮತ್ತೊಂದು ಆಘಾತ!

ಬುಧವಾರದ ವಹಿವಾಟಿನಂದು ಮಧ್ಯಾಹ್ನ 12.30ರ ವೇಳೆಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಮಾರುಕಟ್ಟೆ ಮೌಲ್ಯ ₹ 7.31 ಲಕ್ಷ ಕೋಟಿ ಆಗಿದ್ದರೇ ಟಿಸಿಎಸ್​ ಮೌಲ್ಯ ಒಟ್ಟಾರಿ ₹ 7.39 ಲಕ್ಷ ಕೋಟಿಯಷ್ಟಿತ್ತು. ನಿನ್ನೆ ಏಷ್ಯಾದ ನಂಬರ್​ ಒನ್ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆ ಕಳೆದುಕೊಂಡ ಮುಖೇಶ್ ಅವರ ಕಂಪನಿ ಇಂದು ಷೇರುಪೇಟೆಯ ಅಗ್ರ ಸ್ಥಾನದಿಂದ ಕೆಳಗಿಳಿದಿದೆ.

Mukesh Ambani
ಮುಖೇಶ್ ಅಂಬಾನಿ

By

Published : Mar 11, 2020, 4:14 PM IST

ನವದೆಹಲಿ: ಟಾಟಾ ಗ್ರೂಪ್​ನ ಟಾಟಾ ಕನ್ಸಲ್ಟನ್ಸಿ ಸರ್ವೀಸ್​ (ಟಿಸಿಎಸ್​) ಮುಂಬೈ ಷೇರುಪೇಟೆಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್​ಐಎಲ್​) ಹಿಂದಿಕ್ಕಿ ಮತ್ತೆ ಅಗ್ರ ಸ್ಥಾನಕ್ಕೇರಿದೆ.

ಬುಧವಾರದ ವಹಿವಾಟಿನಂದು ಮಧ್ಯಾಹ್ನ 12.30ರ ವೇಳೆಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಮಾರುಕಟ್ಟೆ ಮೌಲ್ಯ ₹ 7.31 ಲಕ್ಷ ಕೋಟಿ ಆಗಿದ್ದರೇ, ಟಿಸಿಎಸ್​ ಮೌಲ್ಯ ಒಟ್ಟಾರಿ ₹ 7.39 ಲಕ್ಷ ಕೋಟಿಯಷ್ಟಿತ್ತು.

ಕೋವಿಡ್​-19 ಹಬ್ಬುವಿಕೆಯ ಭೀತಿಯಿಂದ ತೈಲ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಆಗಿದೆ. ತೈಲ ಉತ್ಪದಾನೆ ತಗ್ಗಿಸುವ ಒಪೆಕ್ ರಾಷ್ಟ್ರಗಳ ಪ್ರಸ್ತಾಪ ತಿರಸ್ಕರಿಸಿದ ರಷ್ಯಾ ವಿರುದ್ಧ ಸೌದಿ ಅರೇಬಿಯಾ ಸೋಮವಾರ ಏಕಾಏಕಿ ಶೇ 20ರಷ್ಟು ತೈಲ ಬೆಲೆ ಇಳಿಸಿತ್ತು. ಇದರಿಂದ ಜಾಗತಿಕ ಷೇರುಪೇಟೆಗಳು ದಾಖಲೆಯ ಕುಸಿತಕ್ಕೆ ಒಳಗಾದವು.

ಸೋಮವಾರದ ವಹಿವಾಟು ಅಂತ್ಯದ ವೇಳೆಗೆ ರಿಲಯನ್ಸ್ ಷೇರು ಮೌಲ್ಯ ಶೇ. 13ರಷ್ಟು ಇಳಿಕೆಯಾಗಿ ಒಟ್ಟಾರೆ ಎಂ- ಕ್ಯಾಪಿಟಲ್​ ಮೌಲ್ಯ ₹ 7.05 ಲಕ್ಷ ಕೋಟಿಗೆ ತಲುಪಿತು. ಆದರೆ, ಟಿಸಿಎಸ್​ ಎಂ-ಕ್ಯಾಪಿಟಲ್ ₹ 7.40 ಲಕ್ಷ ಕೋಟಿಯಷ್ಟಿತ್ತು.

ABOUT THE AUTHOR

...view details