ನವದೆಹಲಿ:ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯಮಾಪನವು ಗುರುವಾರ ವಹಿವಾಟಿನ ಮುಕ್ತಾಯದ ವೇಳೆಗೆ 12 ಲಕ್ಷ ಕೋಟಿ ರೂ. ದಾಟಿದೆ.
ಸೆನ್ಸೆಕ್ಸ್‌ನಲ್ಲಿ ಟಿಸಿಎಸ್ ಅಗ್ರಸ್ಥಾನದಲ್ಲಿದ್ದು, ಮಧ್ಯಂತರ ಅವಧಿಯಲ್ಲಿ ಶೇ 3.42ರಷ್ಟು ಜಿಗಿದು ದಾಖಲೆಯ ಗರಿಷ್ಠ 3,267 ರೂ.ಗೆ ತಲುಪಿದೆ. ದಿನದ ಅಂತ್ಯದ ವೇಳೆಗೆ ಶೇ 2.89ರಷ್ಟು ಏರಿಕೆ ಕಂಡು 3,250.15 ರೂ.ಯಲ್ಲಿ ಕೊನೆಗೊಂಡಿತು.
ಷೇರು ಬೆಲೆಯಲ್ಲಿ ರ್ಯಾಲಿಯ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು ಬಿಎಸ್‌ಇಯ ವಹಿವಾಟಿನ ಮುಕ್ತಾಯದ ವೇಳೆಗೆ 12,19,581.32 ಕೋಟಿ ರೂ.ಗೆ ಏರಿತು. ಮಾರುಕಟ್ಟೆ ಮೌಲ್ಯಮಾಪನದಲ್ಲಿ 12 ಲಕ್ಷ ಕೋಟಿ ರೂ. ಮೈಲಿಗಲ್ಲು ಸಾಧಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಎರಡನೇ ಸ್ಥಾನದಲ್ಲಿದೆ.