ಕರ್ನಾಟಕ

karnataka

ETV Bharat / business

ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಆಸಕ್ತಿ: ಬಿಡ್ ಸಲ್ಲಿಕೆಗೆ ಇಂದೇ ಕೊನೆ ದಿನ - ಏರ್ ಇಂಡಿಯಾ ಇಒಐ

ಟಾಟಾ ತನ್ನ ಈ ಹಿಂದಿನ ವಿಮಾನಯಾನ ಸಂಸ್ಥೆಯಲ್ಲಿನ ಷೇರು ಖರೀದಿಸುವ ಆಸಕ್ತಿಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹಬ್ಬುತ್ತಿವೆ. 1960ರ ದಶಕದಲ್ಲಿ ವಿಮಾನಯಾನ ರಾಷ್ಟ್ರೀಕರಣಕ್ಕೆ ಮುಂಚಿತವಾಗಿ ಏರ್ ಇಂಡಿಯಾವನ್ನು ಪ್ರಾರಂಭಿಸಿದ್ದು ಟಾಟಾ ಸಂಸ್ಥೆಯೇ ಆಗಿತ್ತು ಎಂಬುದು ಗಮನಾರ್ಹ.

Air India
ಏರ್ ಇಂಡಿಯಾ

By

Published : Dec 14, 2020, 4:00 PM IST

ನವದೆಹಲಿ:ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಖರೀದಿ ಆಸಕ್ತಿ ವ್ಯಕ್ತಪಡಿಸಲು (ಇಒಐ) ಟಾಟಾ ಸನ್ಸ್ ತನ್ನ ಇಒಐ ಕಳುಹಿಸುವ ನಿರೀಕ್ಷೆಯಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

ಉದ್ಯಮಿ ಸಂಘಟನೆಯಾದ ಟಾಟಾ ಗ್ರೂಪ್​ನ ಟಾಟಾ ಸನ್ಸ್ ವಿಮಾನಯಾನದಲ್ಲಿ ಸರ್ಕಾರದ ಪಾಲು ಖರೀದಿಸಲು ನೇರವಾಗಿ ಇಒಐ ಕಳುಹಿಸುತ್ತದೆ. ಟಾಟಾ ಸನ್ಸ್ ಇಒಐ ಅನ್ನು ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ಸುದ್ದಿ ಏಜೆನ್ಸಿ ಐಎಎನ್‌ಎಸ್‌ಗೆ ತಿಳಿಸಿವೆ.

ನವೆಂಬರ್​ನಲ್ಲಿ ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರ ಏರಿಕೆ!

ಟಾಟಾ ಗ್ರೂಪ್​ನ ಅಧಿಕೃತ ವಕ್ತಾರರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಟಾಟಾ ತನ್ನ ಈ ಹಿಂದಿನ ವಿಮಾನಯಾನ ಸಂಸ್ಥೆಯಲ್ಲಿನ ಷೇರು ಖರೀದಿಸುವ ಆಸಕ್ತಿಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹಬ್ಬುತ್ತಿವೆ. 1960ರ ದಶಕದಲ್ಲಿ ವಿಮಾನಯಾನ ರಾಷ್ಟ್ರೀಕರಣಕ್ಕೆ ಮುಂಚಿತವಾಗಿ ಏರ್ ಇಂಡಿಯಾವನ್ನು ಪ್ರಾರಂಭಿಸಿದ್ದು ಟಾಟಾ ಸಂಸ್ಥೆಯಾಗಿದೆ.

ಇಒಐ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನಾಂಕವಾಗಿದೆ. ಟಾಟಾಸ್ ಜೊತೆಗೆ, ವಿಮಾನಯಾನ ವಾಣಿಜ್ಯ ನಿರ್ದೇಶಕ ಮೀನಾಕ್ಷಿ ಮಲ್ಲಿಕ್ ನೇತೃತ್ವದ ಏರ್ ಇಂಡಿಯಾ ನೌಕರರ ತಂಡ ಸಹ ತಮ್ಮ ಇಒಐಗೆ ಕಳುಹಿಸುವ ನಿರೀಕ್ಷೆಯಿದೆ.

ABOUT THE AUTHOR

...view details