ಕರ್ನಾಟಕ

karnataka

ETV Bharat / business

ಕೋವಿಡ್ ಟೆಸ್ಟ್ ಸಾಧನ ತಯಾರಿಸಿದ ಟಾಟಾ: ತಕ್ಷಣಕ್ಕೆ ಸಿಗಲಿದೆ ಪರೀಕ್ಷಾ ಫಲಿತಾಂಶ! - ಟಾಟಾಎಂಡಿ ಕೋವಿಡ್​ ಟೆಸ್ಟ್​

ಕಂಪನಿಯ 'ಟಾಟಾಎಂಡಿ ಚೆಕ್' ಪರೀಕ್ಷಾ ಕಿಟ್​ ಅನ್ನು ಸಿಎಸ್ಐಆರ್-ಐಜಿಐಬಿ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ - ಇನ್​​ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

COVID-19
ಕೋವಿಡ್ ಟೆಸ್ಟ್

By

Published : Nov 9, 2020, 3:17 PM IST

ನವದೆಹಲಿ:ಟಾಟಾ ಮೆಡಿಕಲ್ ಅಂಡ್​ ಡಯಾಗ್ನೋಸ್ಟಿಕ್ಸ್ ಲಿಮಿಟೆಡ್ (ಟಾಟಾ ಎಂಡಿ) ಸೋಮವಾರ ಕೋವಿಡ್​-19 ಸೋಂಕು ಪತ್ತೆಗೆ ಹೊಸ ರೋಗನಿರ್ಣಯ ಪರೀಕ್ಷೆ ಸಾಧನ ಪ್ರಾರಂಭಿಸಿದೆ.

ಟಾಟಾ ತಯಾರಿಸಿರುವ ಸಾಧನವು ಈಗಾಗಲೇ ಅಸ್ತಿತ್ವದಲ್ಲಿರುವ ಪರೀಕ್ಷಾ ಸಾಧನಗಳಿಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಸರಳವಾಗಿದೆ. ದೇಶದಲ್ಲಿ ಬಹು ಪ್ರಮಾಣದಲ್ಲಿ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತೆ ಎಂದು ಕಂಪನಿ ಹೇಳಿಕೊಂಡಿದೆ.

ಕಂಪನಿಯ 'ಟಾಟಾಎಂಡಿ ಚೆಕ್' ಪರೀಕ್ಷಾ ಕಿಟ್​ ಅನ್ನು ಸಿಎಸ್ಐಆರ್-ಐಜಿಐಬಿ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್-ಇನ್​​ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆ್ಯಂಡ್​ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ. ಶೀಘ್ರದಲ್ಲೇ ಭಾರತದಾದ್ಯಂತ ರೋಗನಿರ್ಣಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ಮೂಲಕ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಾದ್ಯಂತ ಪರೀಕ್ಷೆ ಲಭ್ಯವಾಗುವಂತೆ ಮಾಡಲು ಕಂಪನಿಯು ಆಸ್ಪತ್ರೆ ಚೈನ್​, ರೋಗನಿರ್ಣಯ ತಜ್ಞರು ಮತ್ತು ಪ್ರಯೋಗಾಲಯಗಳ ಜತೆ ಸಹಭಾಗಿತ್ವದ ಚರ್ಚೆ ನಡೆಸಿತ್ತು. ಚೆನ್ನೈನಲ್ಲಿನ ಕಾರ್ಖಾನೆಯು ಉತ್ಪಾದನೆ ಪ್ರಾರಂಭಿಸಿದ್ದು, ತಿಂಗಳಿಗೆ 10 ಲಕ್ಷ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ನಾನು ಎಂಡ್​-ಟು-ಎಂಡ್​ ಪರೀಕ್ಷಾ ಹಂತಕ್ಕೆ ಬಂದು ತಲುಪಿದ್ದೇವೆ. ಕೋವಿಡ್​ ಪರೀಕ್ಷೆಯನ್ನು ಹೆಚ್ಚು ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಪ್ರಮಾಣಿಕೃತವಾಗಿ ಮಾಡುತ್ತೇವೆ. ಪರೀಕ್ಷೆಯ ಪರದೆಯ ಪ್ರವೇಶಾತಿ ಮತ್ತು ಲಭ್ಯತೆ ಸೃಷ್ಟಿಸುತ್ತದೆ. ಇದನ್ನೂ ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಟಾಟಾ ಮೆಡಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ಸ್ ಲಿಮಿಟೆಡ್​ನ ಸಿಇಒ ಗಿರೀಶ್ ಕೃಷ್ಣಮೂರ್ತಿ ಪಿಟಿಐಗೆ ತಿಳಿಸಿದ್ದಾರೆ.

ABOUT THE AUTHOR

...view details