ಕರ್ನಾಟಕ

karnataka

ETV Bharat / business

90 ದಿನದಲ್ಲಿ 2,408‬ ಕೋಟಿ ರೂ. ನಷ್ಟ: ನೆದರ್​ಲ್ಯಾಂಡ್​​ ಸ್ಟೀಲ್​ ಘಟಕ ಮಾರಲು ಮುಂದಾದ ಟಾಟಾ! - ಟಾಟಾ ಸ್ಟೀಲ್ ನೆದರ್‌ಲ್ಯಾಂಡ್

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 60ರಷ್ಟು ಕುಸಿತ ದಾಖಲಿಸಿ 1,635 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 4,043 ಕೋಟಿ ರೂ. ಆದಾಯದಲ್ಲಿತ್ತು. ಈ ತ್ರೈಮಾಸಿಕದಲ್ಲಿ 2,408‬ ಕೋಟಿ ರೂ. ಆದಾಯ ನಷ್ಟ ಎದುರಾಗಿದೆ.

Tata Steel
ಟಾಟಾ ಸ್ಟೀಲ್

By

Published : Nov 13, 2020, 10:21 PM IST

ಮುಂಬೈ: ಟಾಟಾ ಸ್ಟೀಲ್ ತನ್ನ ನೆದರ್‌ಲ್ಯಾಂಡ್ ವ್ಯವಹಾರ ಮಾರಾಟಕ್ಕೆ ಸ್ವೀಡನ್ ಮೂಲದ ಎಸ್‌ಎಸ್‌ಎಬಿ ಜೊತೆ ಮಾತುಕತೆ ಆರಂಭಿಸಿದೆ.

ಟಾಟಾ ಸ್ಟೀಲ್ ನೆದರ್‌ಲ್ಯಾಂಡ್ಸ್‌ನ ಮೇಲ್ವಿಚಾರಣಾ ಮಂಡಳಿ ಮತ್ತು ಆಡಳಿತ ಮಂಡಳಿಯೊಂದಿಗೆ ಚರ್ಚೆ ಪ್ರಾರಂಭಿಸಿದೆ. ಈ ಪ್ರಕ್ರಿಯೆಯು ಸ್ಟೇಕ್​ಹೋಲ್ಡರ್​ ಸಮಾಲೋಚನೆ ಸೇರಿದಂತೆ ಮುಂದಿನ ಹಂತಕ್ಕೆ ತೆಗೆದುಕೊಳ್ಳಲಾಗುವುದು ಎಂದು ಟಾಟಾ ಸ್ಟೀಲ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಟಾಟಾ ಸ್ಟೀಲ್ ನೆದರ್ಲ್ಯಾಂಡ್ಸ್ ಮತ್ತು ಟಾಟಾ ಸ್ಟೀಲ್ ಯುಕೆಯನ್ನು ಪ್ರತ್ಯೇಕಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಭವಿಷ್ಯದಲ್ಲಿ ತನ್ನ ನೆದರ್​ಲ್ಯಾಂಡ್​​ ಮತ್ತು ಯುಕೆ ವ್ಯವಹಾರಕ್ಕಾಗಿ ಪ್ರತ್ಯೇಕ ಕಾರ್ಯತಂತ್ರದ ಮಾರ್ಗಗಳನ್ನು ಅನುಸರಿಸಲಿದೆ.

ಇಜ್ಮುಯಿಡೆನ್ ಸ್ಟೀಲ್ ವರ್ಕ್ಸ್ ಸೇರಿದಂತೆ ಟಾಟಾ ಸ್ಟೀಲ್​ನ ನೆದರ್​ಲ್ಯಾಂಡ್​​ ವ್ಯವಹಾರ ಸ್ವಾಧೀನದ ಖರೀದಿ ಆಸಕ್ತಿ ಸ್ವೀಕರಿಸಿದ ಕಂಪನಿ, ಎಸ್ಎಸ್ಎಬಿ ಸ್ವೀಡನ್​ ಜತೆಗೆ ಚರ್ಚೆ ಪ್ರಾರಂಭಿಸಿದೆ ಎಂದು ಹೇಳಿದೆ.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 60ರಷ್ಟು ಕುಸಿತ ದಾಖಲಿಸಿ 1,635 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 4,043 ಕೋಟಿ ರೂ. ಆದಾಯದಲ್ಲಿತ್ತು. ಈ ತ್ರೈಮಾಸಿಕದಲ್ಲಿ 2,408‬ ಕೋಟಿ ರೂ. ಆದಾಯ ನಷ್ಟ ಎದುರಾಗಿದೆ.

ಟಾಟಾ ಸ್ಟೀಲ್ ಭಾರತದಲ್ಲಿ ವಿಶಾಲ ಮಾರುಕಟ್ಟೆ ಬೆಳವಣಿಗೆ ಹೊಂದಿದೆ. ಬಲವಾದ ಹಣದ ಹರಿವಿನ ಉತ್ಪಾದನೆಯೊಂದಿಗೆ ಉತ್ತಮ ವಹಿವಾಟಿನ ಫಲಿತಾಂಶಗಳನ್ನು ನೀಡಿದೆ. ನಮ್ಮ ವ್ಯವಹಾರ ಮಾದರಿಯ ಸ್ಥಿರತೆ ಮತ್ತು ಬದ್ಧತೆಯು ಕೋವಿಡ್​ ಸಾಂಕ್ರಾಮಿಕದ ನಿರಂತರ ಸವಾಲುಗಳನ್ನು ಎದುರಿಸಲು ನೆರವಾಗಿವೆ ಎಂದು ಟಾಟಾ ಸ್ಟೀಲ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ವಿ.ನರೇಂದ್ರನ್ ಹೇಳಿದ್ದಾರೆ.

ABOUT THE AUTHOR

...view details