ನವದೆಹಲಿ: ದೇಶದ ಅತಿದೊಡ್ಡ ಕಂಪನಿಯಾದ ಟಾಟಾ ಸನ್ಸ್, ಈ ಹಿಂದೆ ವಜಾಗೊಂಡಿದ್ದ ಕಾರ್ಯಕಾರಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಎನ್‌ಸಿಎಲ್‌ಎಟಿ ತೀರ್ಪು ಪ್ರಶ್ನಿಸಿ, ಟಾಟಾ ಸನ್ಸ್ ಸುಪ್ರೀಂಕೋರ್ಟ್ ಮೊರೆ ಹೊಗಿದೆ.
ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಲ್‌ಎಟಿ), ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್ಗೆ ಆದೇಶ ನೀಡಿತ್ತು. ಜೊತೆಗೆ ಟಾಟಾ ಗ್ರೂಪ್ ವಜಾ ನಡೆಯನ್ನು 'ಕಾನೂನುಬಾಹಿರ' ಎಂದು ಹೇಳಿತ್ತು.