ಕರ್ನಾಟಕ

karnataka

ETV Bharat / business

ಟಾಟಾ ಮೋಟಾರ್ಸ್ ವಾಹನ ಮಾರಾಟ ಶೇ 51ರಷ್ಟು ಜಿಗಿತ: ವಾಣಿಜ್ಯ ವಾಹನವೆಷ್ಟು ಗೊತ್ತೇ? - ​ಟಾಟಾ ಮೋಟಾರ್ಸ್ ಪಿವಿ ಮಾರಾಟ

ದೇಶದಲ್ಲಿ 38,002 ಯುನಿಟ್‌ಗಳಿಗೆ ಹೋಲಿಸಿದರೆ ಒಟ್ಟು ದೇಶೀಯ ಮಾರಾಟವು ಶೇ 54ರಷ್ಟು ಏರಿಕೆ ಕಂಡು 58,473 ಯೂನಿಟ್​ಗೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Tata Motors
Tata Motors

By

Published : Mar 1, 2021, 3:11 PM IST

ನವದೆಹಲಿ:ಫೆಬ್ರವರಿ ಮಾಸಿಕದಲ್ಲಿ ಟಾಟಾ ಮೋಟಾರ್ಸ್ ಮಾರಾಟದಲ್ಲಿ ಶೇ 51.07ರಷ್ಟು ಹೆಚ್ಚಳವಾಗಿ 61,365 ಯುನಿಟ್​ಗಳಿಗೆ ಏರಿಕೆ ಆಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಟಾಟಾ ಒಟ್ಟು 40,619 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ದೇಶದಲ್ಲಿ 38,002 ಯುನಿಟ್‌ಗಳಿಗೆ ಹೋಲಿಸಿದರೆ ಒಟ್ಟು ದೇಶೀಯ ಮಾರಾಟವು ಶೇ 54ರಷ್ಟು ಏರಿಕೆ ಕಂಡು 58,473 ಯೂನಿಟ್​ಗೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಶೀಲನೆಯ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಎರಡು ಪಟ್ಟು ಏರಿಕೆಯಾಗಿ 27,225ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 12,430 ಯುನಿಟ್‌ಗಳಷ್ಟಿತ್ತು.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 21ರಷ್ಟು ಹೆಚ್ಚಳವಾಗಿ 33,966 ಯುನಿಟ್​ಗಳಿಗೆ ತಲುಪಿದ್ದು, ಇದು ಹಿಂದಿನ ವರ್ಷದ 28,071 ಯುನಿಟ್​ಗಳಷ್ಟಿತ್ತು.

ಇದನ್ನೂ ಓದಿ: ಮಾರುತಿ ಸುಜುಕಿ ಶೈನಿಂಗ್​: ಕಾರು ಮಾರಾಟದಲ್ಲಿ ಶೇ 11.8 ರಷ್ಟು ಜಿಗಿತ!

ABOUT THE AUTHOR

...view details