ಕರ್ನಾಟಕ

karnataka

ETV Bharat / business

ಟಾಟಾ ಮೋಟಾರ್ಸ್​ ಜಾಗತಿಕ ಸಗಟು ಮಾರಾಟ ಶೇ 43ರಷ್ಟು ಏರಿಕೆ! - trending stocks

ಕಂಪನಿಯ ವಾಣಿಜ್ಯ ವಾಹನಗಳ ಜಾಗತಿಕ ಸಗಟು ಮತ್ತು ಡೇವೂ ಶ್ರೇಣಿಯು 2020-21ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ 55 ಪ್ರತಿಶತದಷ್ಟು ಏರಿಕೆಯಾಗಿ 1,09,428ಕ್ಕೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

Tata Motors
Tata Motors

By

Published : Apr 15, 2021, 3:09 PM IST

ಮುಂಬೈ:2020-21ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ಗ್ರೂಪ್​ನ ಜಾಗತಿಕ ಸಗಟು ಮಾರಾಟ 3,30,125 ಯುನಿಟ್‌ಗಳಿಗೆ ತಲುಪಿದ್ದು, ಕಂಪನಿಯು ಶೇ 43ರಷ್ಟು ಏರಿಕೆ ಕಂಡಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್‌ನ ಷೇರು ಬೆಲೆ ಮತ್ತಷ್ಟು ಏರಿಕೆಯಾಗಿದೆ.

ಕಂಪನಿಯ ವಾಣಿಜ್ಯ ವಾಹನಗಳ ಜಾಗತಿಕ ಸಗಟು ಮತ್ತು ಡೇವೂ ಶ್ರೇಣಿಯು 2020-21ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 55 ಪ್ರತಿಶತದಷ್ಟು ಏರಿಕೆಯಾಗಿ 1,09,428ಕ್ಕೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಾರ್ಚ್‌ನಲ್ಲಿ ಭಾರತದ ಸಗಟು ಹಣದುಬ್ಬರ ಶೇ 7.39ಕ್ಕೆ ಏರಿಕೆ

ಕಂಪನಿಯು 2019-20ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಜಾಗತಿಕ ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ 39ರಷ್ಟು ವೃದ್ಧಿಸಿಕೊಂಡು 2,20,697ಕ್ಕೆ ಹೆಚ್ಚಿಸಿಕೊಂಡಿದೆ. 2020-21ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ನ ಜಾಗತಿಕ ಸಗಟು ಮಾರಾಟ 1,36,461 ಯುನಿಟ್‌ಗಳಷ್ಟಿತ್ತು. ಈ ತ್ರೈಮಾಸಿಕದಲ್ಲಿ ಜಾಗ್ವಾರ್ ಸಗಟು 31,814 ವಾಹನಗಳಲ್ಲಿದ್ದರೆ, ಲ್ಯಾಂಡ್ ರೋವರ್ 1,04,647 ವಾಹನಗಳಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಮಧ್ಯಾಹ್ನ 1 ಗಂಟೆಗೆ ಟಾಟಾ ಮೋಟಾರ್ಸ್ ಷೇರುಗಳು ಬಿಎಸ್‌ಇಯಲ್ಲಿ ತಲಾ 302.40 ರೂ.ಗೆ ಫ್ಲಾಟ್ ವಹಿವಾಟು ನಡೆಸಿದೆ.

ABOUT THE AUTHOR

...view details