ಕರ್ನಾಟಕ

karnataka

ETV Bharat / business

ಗರಿಗೆದರಿದ ಚಟುವಟಿಕೆ: ಟಾಟಾ ವಾಹನ ಮಾರಾಟದಲ್ಲಿ ಶೇ 13.38ರಷ್ಟು ಏರಿಕೆ - ವಾಣಿಜ್ಯ ಸುದ್ದಿ

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಒಟ್ಟು 32,166 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ದೇಶಿಯ ಅತಿದೊಡ್ಡ ಆಟೋಮೊಬೈಲ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Tata Motors
ಟಾಟಾ ಮೋಟಾರ್ಸ್​

By

Published : Sep 3, 2020, 4:51 PM IST

ನವದೆಹಲಿ: ಟಾಟಾ ಮೋಟಾರ್ಸ್ ಆಗಸ್ಟ್‌ ಮಾಸಿಕದಲ್ಲಿ ಒಟ್ಟು ಮಾರಾಟದಲ್ಲಿ ಶೇ.13.38ರಷ್ಟು ಏರಿಕೆ ಕಂಡು 36,472 ಯುನಿಟ್‌ಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಒಟ್ಟು 32,166 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ದೇಶಿಯ ಅತಿದೊಡ್ಡ ಆಟೋಮೊಬೈಲ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ 29,140 ಯುನಿಟ್‌ಗಳಿಂದ ಒಟ್ಟು ದೇಶಿಯ ಮಾರಾಟವು ಶೇ.21.6ರಷ್ಟು ಏರಿಕೆ ಕಂಡು 35,420ಕ್ಕೆ ತಲುಪಿದೆ. ಕಳೆದ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಎರಡು ಪಟ್ಟು ಹೆಚ್ಚಳವಾಗಿ 18,583ಕ್ಕೆ ತಲುಪಿದೆ. 2019ರ ಇದೇ ತಿಂಗಳಲ್ಲಿ 7,316 ಯುನಿಟ್ ಮಾರಾಟವಾಗಿದ್ದವು.

ಕಂಪನಿಯು ಕಳೆದ ತಿಂಗಳು ಒಟ್ಟು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ. 28ರಷ್ಟು ಕುಸಿತವನ್ನು ವರದಿ ಮಾಡಿ 17,889 ಯುನಿಟ್​​ ಮಾರಾಟ ಮಾಡಿದೆ. ಇದು ಹಿಂದಿನ ವರ್ಷದಲ್ಲಿ 24,850 ಯುನಿಟ್​ಗಳಷ್ಟಿತ್ತು.

ABOUT THE AUTHOR

...view details