ಕರ್ನಾಟಕ

karnataka

ETV Bharat / business

ಟಾಟಾ ಟಿಯಾಗೋ ಲಿಮಿಟೆಡ್​ ಎಡಿಷನ್​ ಲಾಂಚ್: ಎಕ್ಸ್​ ಶೋರೂಂ ಬೆಲೆ ಎಷ್ಟು ಗೊತ್ತೇ? - ಟಾಟಾ ಟಿಯಾಗೊ ಕಾರು ದರ

ಹೊಸ ಮಾಡಲ್​ ಕಪ್ಪು ಅಲೋ ವೀಲ್ಸ್, ಸೆನ್ಸಾರ್​ ಜತೆಗೆ ರಿವರ್ಸ್ ಪಾರ್ಕಿಂಗ್ ಡಿಸ್​​ಪ್ಲೇ, ವಾಯ್ಸ್ ಕಮಾಂಡ್ ರೆಕಗ್ನಿಷನ್ ನಂತಹ ಹೆಚ್ಚುವರಿ ಪೀಚರ್​​ ಹೊಂದಿದೆ. ಟಿಯಾಗೊ ಸೀಮಿತ ಆವೃತ್ತಿಯ ಟ್ರಿಮ್ ಅನ್ನು 5.79 ಲಕ್ಷ ರೂ. (ಎಕ್ಸ್‌ಶೋರೂಂ ದೆಹಲಿ) ಬಿಡುಗಡೆ ಮಾಡಿದೆ.

Tata Motors
Tata Motors

By

Published : Jan 30, 2021, 4:47 PM IST

ನವದೆಹಲಿ: ಟಾಟಾ ಮೋಟಾರ್ಸ್ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೊ ಸೀಮಿತ ಆವೃತ್ತಿಯ ಟ್ರಿಮ್ ಅನ್ನು 5.79 ಲಕ್ಷ ರೂ. (ಎಕ್ಸ್‌ಶೋರೂಂ ದೆಹಲಿ) ಬಿಡುಗಡೆ ಮಾಡಿದೆ ಎಂದು ತಿಳಿಸಿದೆ.

ಟಿಯಾಗೊ ಪರಿಷ್ಕೃತ ಶೈಲಿ ಬಿಡುಗಡೆಯ ವಾರ್ಷಿಕೋತ್ಸವದ ನೆನಪಿನಾರ್ಥವಾಗಿ ಟಿಯಾಗೊ ಮೂಲ ಮಾಡಲ್​ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರ್ಪಡೆ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಮಾಡಲ್​ ಕಪ್ಪು ಅಲೋ ವೀಲ್ಸ್, ಸೆನ್ಸಾರ್​ ಜತೆಗೆ ರಿವರ್ಸ್ ಪಾರ್ಕಿಂಗ್ ಡಿಸ್​​ಪ್ಲೇ, ವಾಯ್ಸ್ ಕಮಾಂಡ್ ರೆಕಗ್ನಿಷನ್ ನಂತಹ ಹೆಚ್ಚುವರಿ ಪೀಚರ್​​ ಹೊಂದಿದೆ.

ಇದನ್ನೂ ಓದಿ: ವಿವಾದಿತ 3 ಕೃಷಿ ಕಾಯ್ದೆ ಬಳಿಕ ಬಜೆಟ್​ ಸೆಷನ್​ನಲ್ಲಿ 20+ ಮಸೂದೆಗಳ ಮಂಡನೆಗೆ ಮೋದಿ ಸರ್ಕಾರ ಸಜ್ಜು!

2016ರಲ್ಲಿ ಪ್ರಾರಂಭವಾದಾಗಿನಿಂದ ಟಿಯಾಗೊ ತನ್ನ ವಿಭಾಗದಲ್ಲಿ ಬಹಳ ಯಶಸ್ವಿಯಾಗಿ, ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದನ್ನೇ ಅನುಸರಿಸಿ ಉತ್ಪನ್ನದ ಬಿಎಸ್-ವಿ ಆವೃತ್ತಿಯನ್ನು 2020ರಲ್ಲಿ ಪರಿಚಯಿಸಲಾಗಿತ್ತು. ಜಿಎನ್‌ಸಿಎಪಿ ಬಿಡುಗಡೆ ಮಾಡುವಾಗ 4 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಪಡೆದುಕೊಂಡಿತು ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ ಹೆಡ್ ವಿವೇಕ್ ಶ್ರೀವತ್ಸ ಹೇಳಿದರು.

3.25 ಲಕ್ಷಕ್ಕೂ ಹೆಚ್ಚು ಗ್ರಾಹಕನ್ನು ಟಿಯಾಗೊ ಹೊಂದಿದೆ. ಟಿಯಾಗೊಗೆ ಭಾರಿ ಮಾರುಕಟ್ಟೆ ಪ್ರತಿಕ್ರಿಯೆ ದೊರೆತಿದೆ ಎಂದರು.

ABOUT THE AUTHOR

...view details