ನವದೆಹಲಿ:ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ನೆಕ್ಸನ್ ಮತ್ತು ಆಲ್ಟ್ರೊಜ್‌ಗಳಿಗೆ ನೂತನ ಹಣಕಾಸು ಪ್ಲಾನ್ ಪರಿಚಯಿಸಿದ್ದು, ಇದರಡಿ ಗ್ರಾಹಕರು ಆರು ತಿಂಗಳ ಇಎಂಐ ರಜೆ ಪಡೆಯಬಹುದು.
ಟಾಟಾ ಮೋಟಾರ್ಸ್ನ ಆಯ್ದ ಕಾರುಗಳಿಗೆ 6 ತಿಂಗಳು EMI ರಜೆ: ಇದ್ರಲ್ಲಿ ನಿಮ್ಮ ಕಾರ್ ಇದೆಯಾ?
ಉದ್ದೇಶಿತ ಯೋಜನೆಯಡಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್ ಮಾಡಬಹುದಾಗಿದೆ. ಆರು ತಿಂಗಳ ಇಎಂಐ ರಜಾದಿನ ಪಡೆಯಬಹುದು (ಮಾಸಿಕ ಬಡ್ಡಿ ಪಾವತಿ) ಮತ್ತು ಐದು ವರ್ಷಗಳ ಸಾಲದ ಅವಧಿಗೆ 100 ಪ್ರತಿಶತದಷ್ಟು ಆನ್ - ರೋಡ್ ಫಂಡ್ಗೂ ಅವಕಾಶ ನೀಡಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
ಉದ್ದೇಶಿತ ಯೋಜನೆಯಡಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್ ಮಾಡಬಹುದಾಗಿದೆ. ಆರು ತಿಂಗಳ ಇಎಂಐ ರಜಾದಿನ ಪಡೆಯಬಹುದು (ಮಾಸಿಕ ಬಡ್ಡಿ ಪಾವತಿ) ಮತ್ತು ಐದು ವರ್ಷಗಳ ಸಾಲದ ಅವಧಿಗೆ 100 ಪ್ರತಿಶತದಷ್ಟು ಆನ್ - ರೋಡ್ ಫಂಡ್ಗೂ ಅವಕಾಶ ನೀಡಲಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಹ ವೇತನ ಮತ್ತು ಸ್ವಯಂ ಉದ್ಯೋಗಿಗಳಿಗೆ ಕರೂರ್ ವೈಶ್ಯ ಬ್ಯಾಂಕ್ (ಕೆವಿಬಿ) ಸಹಭಾಗಿತ್ವದ ಮೂಲಕ ಈ ಪ್ಲಾನ್ ನೀಡುತ್ತಿದೆ. ಬಹು ಹಣಕಾಸು ಪಾಲುದಾರರೊಂದಿಗಿನ ಒಪ್ಪಂದದ ಮೂಲಕ ಎಂಟು ವರ್ಷಗಳವರೆಗೆ ದೀರ್ಘಾವಧಿಯ ಸಾಲದ ಮೇಲೆ ಕೈಗೆಟುಕುವ, ಸ್ಟೆಪ್ - ಅಪ್ ಇಎಂಐಗಳನ್ನು ಒದಗಿಸಲಾಗುತ್ತಿದೆ ಎಂದು ವಾಹನ ತಯಾರಕ ಸಂಸ್ಥೆ ತಿಳಿಸಿದೆ.