ಚೆನ್ನೈ:ವಾಹನ ಉದ್ಯಮದಲ್ಲಿನ ಅನಿರೀಕ್ಷಿತ ಮಾರಾಟ ಕುಸಿತ, ಬೇಡಿಕೆ ಇಳಿಕೆ ಮತ್ತು ಉತ್ಪಾದನೆ ಕಡಿತದಿಂದಾಗಿ ಟಾಟಾ ಮೋಟಾರ್ಸ್ ತನ್ನ ಕೆಲ ಘಟಕಗಳ ತಯಾರಿಕಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಉದ್ಯಮ ಕುಸಿತದ ಸ್ಪಷ್ಟನೆ ನೀಡಿ ಲ್ಯೂಕಾಸ್-ಟಿವಿಎಸ್ ತನ್ನ ಉದ್ಯೋಗಿಗಳಿಗೆ ಕೆಲಸ ರಹಿತ ದಿನಗಳನ್ನು ಘೋಷಿಸಿದೆ. ಮಾರುತಿ ಸುಜುಕಿ ಇಂಡಿಯಾ ಸಹ 3,000 ಗುತ್ತಿಗೆ ನೌಕರ ಒಪ್ಪಂದ ನವೀಕರಿಸದೇ ಕೆಲಸದಿಂದ ತೆಗೆದು ಹಾಕಿದೆ. ಹೀರೋ ಮೋಟಾರ್ಸ್ ಕೂಡ ಆಗಸ್ಟ್ 15ರಿಂದ 18ರವರೆಗೆ ಉತ್ಪಾದನೆಯನ್ನು ನಿಲ್ಲಿಸಿದೆ. ಇದರ ಬೆನ್ನಲ್ಲೇ ದೇಶದ ಅತಿದೊಡ್ಡ ಉದ್ಯಮವಾದ ಟಾಟಾ ಮೋಟಾರ್ಸ್ ಕೂಡ ತಾತ್ಕಾಲಿಕವಾಗಿ ತನ್ನ ಉತ್ಪಾದನೆಯನ್ನು ಸ್ಥಗಿತ ಮಾಡಿದೆ.