ಚೆನ್ನೈ:ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಒಂದು ರೂಪಾಯಿಗೆ ಇಡ್ಲಿ ಮಾರುತ್ತಿದ್ದ ವೃದ್ಧೆಯ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು ಒಂದೇ ದಿನದಲ್ಲಿ ಎಲ್ಪಿಜಿ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.
ವೃದ್ಧೆಯ ಪಡಿಪಾಟಲು ನೋಡಿದ ಸ್ಥಳೀಯ ಎಲ್ಪಿಜಿ ಸಂಪರ್ಕ ಅಧಿಕಾರಿಗಳು ಕಮಲಥಾಲ್ ಅವರ ಬಳಿ ಬಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕವನ್ನು ಒಂದೇ ದಿನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ.
'ಒಂದು ವಿನಮ್ರ ಕಥೆಯು ನೀವು ಮಾಡುವ ಪ್ರತಿಯೊಂದು ಕೆಲಸದ ಭಾಗವಾಗಬಲ್ಲದು. ಕಮಲಥಾಲ್ ಎಂಬ ವೃದ್ಧೆಯು ಸ್ಟೌವ್ ಬಳಸಿ ಇಡ್ಲಿ ಮಾಡಿ 1 ರೂ.ಗೆ ಮಾರುವುದನ್ನು ನಾನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. ಯಾರಾದರೂ ಹತ್ತಿರದಲ್ಲಿ ಇದ್ದರೆ ಆಕೆಯ ವ್ಯವಹಾರದಲ್ಲಿ ಸಹಾಯ ಮಾಡಿ ಎಂದು ಆನಂದ್ ಮಹೀಂದ್ರ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.
ಕಮಲಥಾಲ್ ಅವರ ಉತ್ಸಾಹ ಮತ್ತು ಬದ್ಧತೆಗೆ ಸೆಲ್ಯೂಟ್. ಎಲ್ಪಿಜಿ ಸಂಪರ್ಕ ಪಡೆಯಲು ಸ್ಥಳೀಯ ಒಎಂಸಿ ಅಧಿಕಾರಿಗಳು ಅವರಿಗೆ ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ.