ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ವರ್ಷದ ಜುಲೈ 15ರವರೆಗೆ ಉಚಿತ ಸೇವೆ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದೆ ಎಂದು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತಿಳಿಸಿದೆ.
2021ರ ಏಪ್ರಿಲ್ ರಿಂದ ಮೇ 31ರ ನಡುವೆ ಉಚಿತ ಸೇವೆ ಅಥವಾ ಖಾತರಿ ಅವಧಿ ಮುಗಿಯುವ ಎಲ್ಲ ಗ್ರಾಹಕರಿಗೆ ಈ ಪ್ರಯೋಜನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಎಲ್ಲ ಗ್ರಾಹಕರು ಈಗ 2021ರ ಜುಲೈ 15ರವರೆಗೆ ವಿಸ್ತರಣೆ ಪಡೆಯಲಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ತೆರಿಗೆ ಪಾವತಿದಾರರ ಗಮನಕ್ಕೆ!: ಈ 6 ದಿನಗಳ ಮಟ್ಟಗೆ ಐಟಿ ಫೈಲಿಂಗ್ ಪೋರ್ಟಲ್ ಬದಲು
ಈ ಬಿಕ್ಕಟ್ಟಿನ ಕಾಲದಲ್ಲಿ ಸ್ಥಳೀಯ ನಿರ್ಬಂಧಗಳು ಮತ್ತು ರಾಜ್ಯ ಲಾಕ್‌ಡೌನ್‌ಗಳಿಂದಾಗಿ ಈ ಎಲ್ಲಾ ಸೇವೆಗಳನ್ನು ಪಡೆಯುವುದು ಕಷ್ಟ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದೇ ಸಮಯದಲ್ಲಿ ಈ ಪರೀಕ್ಷಾ ಕಾಲದಲ್ಲಿ ಎಲ್ಲರಿಗೂ ಕೃತಜ್ಞತೆಯನ್ನು ತೋರಿಸಲು ಇದು ನಮ್ಮ ಅವಕಾಶ ಎಂದು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿ ಮುಖ್ಯಸ್ಥ ಸತೋಶಿ ಉಚಿಡಾ ಹೇಳಿದ್ದಾರೆ.
ಪ್ರಸ್ತುತ ದೇಶವು ಎದುರಿಸುತ್ತಿರುವ ಅಸಂಖ್ಯಾತ ಸವಾಲುಗಳ ಮಧ್ಯೆ, ಈ ವಿಸ್ತರಣೆಯು ಲಾಕ್‌ಡೌನ್ ಮತ್ತು ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಗ್ರಾಹಕರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.