ಮುಂಬೈ:ಬಾಲಿವುಡ್ ನಟ ಸನ್ನಿ ಲಿಯೋನ್ ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ನಡೆದ 13ನೇ ಆವೃತ್ತಿಯ ಏಷ್ಯನ್ ಬಿಸಿನೆಸ್ ಮತ್ತು ಸೋಷಿಯಲ್ ಫೋರಮ್ನಲ್ಲಿ ಮೂರು ಗೌರವಗಳನ್ನು ಪಡೆದಿದ್ದಾರೆ.
ಏಷ್ಯನ್ ಬಿಸಿನೆಸ್ ಫೋರಮ್... ನಟಿ ಸನ್ನಿ ಲಿಯೋನ್ಗೆ 'ಪ್ರಭಾವಶಾಲಿ ಏಷ್ಯನ್' ಸೇರಿ 3 ಪ್ರಶಸ್ತಿ..! - ಏಷ್ಯಾದ ಮಹಿಳಾ ಸಬಲೀಕರಣ ಪ್ರಶಸ್ತಿ
ನಟಿ ಸನ್ನಿ ಲಿಯೋನ್ ಅವರು ಏಷ್ಯಾ ಮಹಿಳಾ ಸಬಲೀಕರಣ ಪ್ರಶಸ್ತಿ, 40 ವರ್ಷದೊಳಗಿನ ಪ್ರಭಾವಶಾಲಿ ಏಷ್ಯನ್ ಪ್ರಶಸ್ತಿ ಮತ್ತು ಸ್ಟಾರ್‌ಸ್ಟ್ರಕ್ ಎಂಬ ಕಾಸ್ಮೆಟಿಕ್ ಬ್ರಾಂಡ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳನ್ನು ಸ್ವೀಕರಿಸಲು 38 ವರ್ಷದ ಪತಿ ಡೇನಿಯಲ್ ವೆಬರ್ ಅವರೊಂದಿಗೆ ಸನ್ನಿ ಲಿಯೋನ್ ಅವರು ಥೈಲ್ಯಾಂಡ್ಗೆ ತೆರಳಿದ್ದರು.
ಸನ್ನಿ ಅವರಿಗೆ ಏಷ್ಯಾ ಮಹಿಳಾ ಸಬಲೀಕರಣ ಪ್ರಶಸ್ತಿ, 40 ವರ್ಷದೊಳಗಿನ ಪ್ರಭಾವಶಾಲಿ ಏಷ್ಯನ್ ಪ್ರಶಸ್ತಿ ಮತ್ತು ಸ್ಟಾರ್‌ಸ್ಟ್ರಕ್ ಎಂಬ ಕಾಸ್ಮೆಟಿಕ್ ಬ್ರಾಂಡ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳನ್ನು ಸ್ವೀಕರಿಸಲು 38 ವರ್ಷದ ಪತಿ ಡೇನಿಯಲ್ ವೆಬರ್ ಅವರೊಂದಿಗೆ ಸನ್ನಿ ಲಿಯೋನ್ ಅವರು ಥೈಲ್ಯಾಂಡ್ಗೆ ತೆರಳಿದ್ದರು.
'13ನೇ ವಾರ್ಷಿಕ ಏಷ್ಯಾ ಒನ್ ಬಿಸಿನೆಸ್ ಮತ್ತು ಸೋಷಿಯಲ್ ಫೋರಮ್ನಲ್ಲಿ ಏಷ್ಯಾದ ಗಣ್ಯರೊಂದಿಗೆ ಈ ಪ್ರಶಸ್ತಿಗಳನ್ನು ಪಡೆದಿದ್ದಕ್ಕೆ ತುಂಬಾ ಸಂತೋಷ ಮತ್ತು ಹೆಮ್ಮೆಯಾಗಿದೆ. ಮಹಿಳಾ ಸಬಲೀಕರಣ ಪ್ರಶಸ್ತಿ, 40 ವರ್ಷದೊಳಗಿನ 40 ಅತ್ಯಂತ ಪ್ರಭಾವಶಾಲಿ ಪ್ರಶಸ್ತಿ ಹಾಗೂ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕಾಸ್ಮೆಟಿಕ್ ಬ್ರಾಂಡಿಂಗ್ ಪ್ರಶಸ್ತಿ ನೀಡಿದ ಆಯೋಜಕರಿಗೆ ಧನ್ಯವಾದಗಳು! ಧನ್ಯವಾದಗಳು! ಧನ್ಯವಾದಗಳು!!' ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.