ಹೈದರಾಬಾದ್:ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ ಬಳಕೆಯನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅನುಮೋದಿಸುವ ಸಾಧ್ಯತೆಯಿದೆ ಎಂದು ಡಾ. ರೆಡ್ಡಿಸ್ ಲ್ಯಾಬ್ಸ್ ಸಿಇಒ ದೀಪಕ್ ಸಪ್ರಾ ಮತ್ತು ಎಪಿಐ ತಿಳಿಸಿದೆ.
ಭಾರತದಲ್ಲಿ ಲಸಿಕೆ ಪೂರೈಸಲು ಡಾ. ರೆಡ್ಡಿಸ್ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರ ಭಾಗವಾಗಿ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಭಾರತದಲ್ಲಿ ನಡೆಸಲಾಯಿತು. ಪ್ರಯೋಗದ ಮಧ್ಯಂತರ ಫಲಿತಾಂಶಗಳನ್ನು ಭಾರತದ ಔಷಧ ಆಡಳಿತಕ್ಕೆ ಹಸ್ತಾಂತರಿಸಲಾಯಿತು.
ಸ್ಪುಟ್ನಿಕ್-ವಿ ಎರಡು ಡೋಸ್ ನೀಡಬೇಕಾಗುತ್ತದೆ ಎಂದು ದೀಪಕ್ ಹೇಳಿದ್ದಾರೆ. ಮೊದಲ ಡೋಸ್ ನಂತರ 21ನೇ ದಿನದಂದು ಎರಡನೇ ಡೋಸ್ ನೀಡಬೇಕು. 28ರಿಂದ 42 ದಿನಗಳ ನಡುವೆ ಕೊರೊನಾ ವೈರಸ್ ಪರಿಣಾಮಕಾರಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿದುಬಂದಿದೆ.