ನವದೆಹಲಿ:ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ, ತನ್ನ ಶೇ 92ರಷ್ಟು ನೌಕರರಿಗೆ ತಾವು ನಿರ್ವಹಿಸಿದ ಗಂಟೆಗಳ ಆಧಾರದ ಮೇಲೆ ಮಾಸಿಕ ವೇತನ ಪಾವತಿ ಮಾಡಲಿದೆ.
ಲಾಕ್ಡೌನ್ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಉದ್ಯೋಗಿಗಳ ಅವಶ್ಯಕತೆಯನ್ನು ಪೂರೈಸಲು ಒಂದು ನ್ಯಾಯೋಚಿತ ಅಳತೆಗೋಲಿಗೆ ಮೊರೆ ಹೋಗಿದ್ದೇವೆ. ಕಂಪನಿಯು ಕೆಲಸದ ಗಂಟೆಗಳ ಅನುಸಾರ ಎಲ್ಲ ಉದ್ಯೋಗಿಗಳಿಗೆ ವೇತನ ಪಾವತಿಸಲಿದೆ. ಮೇ 1ರಂದು ಸಂಬಳ ಜಮಾ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆದಾಯದ ಮೂಲವನ್ನು ಕಾಯ್ದುಕೊಳ್ಳುವ ಸವಾಲುಗಳ ಹೊರತಾಗಿಯೂ ಉದ್ಯೋಗಿಗಳನ್ನು ತಾತ್ಕಾಲಿಕ ವಿಸರ್ಜನೆ (ಲೇ ಆಫ್) ಯೋಜನೆಯನ್ನು ನಾವು ಹೊಂದಿಲ್ಲ. ಶೇ 92ರಷ್ಟು ಉದ್ಯೋಗಿಗಳಿಗೆ ಪಾರ್ಟ್ ವೇತನ ಪಾವತಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ನಾವು ನಮ್ಮ ಮೂಲ (ವೇತನ) ರಚನೆಯ ಪುನಃ ಆರಂಭಿಸಿ ಸುಸ್ಥಿತಿಗೆ ಮರಳುವ ಬಗ್ಗೆಯೂ ಪರಿಗಣಿಸುತ್ತೇವೆ. ವಿಮಾನ ಸೇವೆ ಪುನಃ ಆರಂಭಿಸುವ ತನಕ ಅನಿಶ್ಚಿತತೆಯ ನಡುವೆ ನಮ್ಮೊಂದಿಗೆ ಜೊತೆಯಾಗಿ ನಿಲ್ಲುವ ಸಿಬ್ಬಂದಿಗೆ ಸೂಕ್ತವಾದ ಭತ್ಯೆಗಳನ್ನು ನೀಡಬೇಕಿದೆ ಎಂದಿದೆ.
ಏಪ್ರಿಲ್ ಮತ್ತು ಮೇ ತಿಂಗಳವರೆಗೆ ಪೈಲಟ್ಗಳಿಗೆ ಯಾವುದೇ ವೇತನವು ದೊರೆಯುವುದಿಲ್ಲ. ಮಾರ್ಚ್ 25ರಂದು ಹಾರಾಟ ನಿಷೇಧವು ಆರಂಭವಾದಾಗಿನಿಂದ ಸರಕು ಸಾಗಣೆ ವಿಮಾನಗಳ ಪೈಲಟ್ಗಳಿಗೆ ಮಾತ್ರ ಸಂಭಾವನೆ ಪಡೆಯುತ್ತಾರೆ. ಆದರೆ, ಅದು ಅವರು ನಿರ್ವಹಿಸಿದ ಗಂಟೆಗಳ ಆಧಾರದ ಮೇಲೆ ಎಂದು ಸ್ಪೈಸ್ಜೆಟ್ ಸ್ಪಷ್ಟಪಡಿಸಿದೆ.