ಕರ್ನಾಟಕ

karnataka

ETV Bharat / business

ನಾಳೆಯಿಂದಲೇ ಯುಎಇಗೆ ಸ್ಪೈಸ್​ಜೆಟ್​ನಿಂದ ವಿಮಾನ ಹಾರಾಟ ಪುನಾರಂಭ!!

ದೆಹಲಿ, ಮುಂಬೈ, ಕೋಯಿಕೋಡ್ ಮತ್ತು ಕೊಚ್ಚಿಯಿಂದ ಯುಎಇಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ಈ ವಿಮಾನಗಳು ಯುಎಇಗೆ ಅರ್ಹ ಪ್ರಯಾಣಿಕರನ್ನು ಮಾತ್ರ ಸಾಗಿಸುತ್ತವೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ..

Flights
ವಿಮಾನ ಹಾರಾಟ

By

Published : Jul 11, 2020, 8:01 PM IST

ನವದೆಹಲಿ : ಅರ್ಹ ಗುರುತಿನ ಮತ್ತು ಪೌರತ್ವ (ಐಸಿಎ) ಅನುಮೋದಿತ ಯುಎಇ ನಿವಾಸಿಗಳಿಗೆ ಜುಲೈ 12 ಮತ್ತು 26ರ ನಡುವೆ ಭಾರತದ ನಾಲ್ಕು ನಿಲ್ದಾಣಗಳಿಂದ ರಾಸ್ ಅಲ್-ಖೈಮಾಗೆ (ದುಬೈ) ವಿಮಾನ ಹಾರಾಟ ನಡೆಸಲಿದೆ ಎಂದು ಸ್ಪೈಸ್​ಜೆಟ್ ವಿಮಾನಯಾನ ಸಂಸ್ಥೆ ತಿಳಿಸಿದೆ.

ದೆಹಲಿ, ಮುಂಬೈ, ಕೋಯಿಕೋಡ್ ಮತ್ತು ಕೊಚ್ಚಿಯಿಂದ ಯುಎಇಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ಈ ವಿಮಾನಗಳು ಯುಎಇಗೆ ಅರ್ಹ ಪ್ರಯಾಣಿಕರನ್ನು ಮಾತ್ರ ಸಾಗಿಸುತ್ತವೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ. ರಾಸ್ ಅಲ್-ಖೈಮಾ ವಿಮಾನ ನಿಲ್ದಾಣದಿಂದ ಸ್ಪೈಸ್​ಜೆಟ್ ದುಬೈ, ಶಾರ್ಜಾ ಮತ್ತು ಅಬುಧಾಬಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ತರಬೇತುದಾರರನ್ನು ಸಹ ಒದಗಿಸಲಿದೆ.

ವಿಮಾನಯಾನ ಸಂಸ್ಥೆಯ ಪ್ರಕಾರ, ಎಲ್ಲಾ ಪ್ರಯಾಣಿಕರು ನಿರ್ಗಮನಕ್ಕೂ ಮುನ್ನ 96 ಗಂಟೆಗಳ ಮುಂಚೆ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಗೆ ಒಳಗಾಗಿರಬೇಕಾಗುತ್ತದೆ. ಕೋವಿಡ್ -19 ನೆಗಿಟಿವ್​ ಪರೀಕ್ಷಾ ಫಲಿತಾಂಶ ಹೊಂದಿದ್ದವರು ಮಾತ್ರವೇ ಹಾರಾಟಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ.

ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಲ್-ಹೊಸ್ನ್ ಯುಎಇ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ವಿಮಾನ ಹತ್ತುವ ಮೊದಲು ಆರೋಗ್ಯ ಘೋಷಣೆ ನಮೂನೆ ಮತ್ತು ಸಂಪರ್ಕತಡೆ ತೆಗೆದುಕೊಳ್ಳುವ ನಮೂನೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

ABOUT THE AUTHOR

...view details